ಜಿಲ್ಲಾ ಸುದ್ದಿ
ಸಿದ್ದರಾಮಯ್ಯಗೆ ಕೆಲಸವಿಲ್ಲ; ಜನ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ: ಸಚಿವ ಉಮೇಶ್ ಕತ್ತಿ ವಾಗ್ದಾಳಿ

ಬಾಗಲಕೋಟೆ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇವರಿಗೆ ಹೇಳೋಕೆ ಕೆಲಸ ಇಲ್ಲ. ಅದಕ್ಕಾಗಿ ಅವ್ರನ್ನ ರಾಜ್ಯದ ಜನ ವಿಪಕ್ಷದಲ್ಲಿ ಕೂರಿಸಿದ್ದಾರೆ ಎಂದು ಬಾಗಲಕೋಟೆಯಲ್ಲಿ ಆಹಾರ ಸಚಿವ ಉಮೇಶ್ ಕತ್ತಿ ಸಿದ್ದರಾಮಯ್ಯಗೆ ಟೀಕಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ, ಕೋವಿಡ್ ನಿಯಂತ್ರಣಲ್ಲಿ ಸರ್ಕಾರ ವಿಫಲವಾಗಿದೆ ಎಂದು ಸಿದ್ದರಾಮಯ್ಯ ಫೇಸ್ಬುಕ್ನಲ್ಲಿ ಬರೆದುಕೊಂಡ ವಿಚಾರಕ್ಕೆ ಸಚಿವ ಉಮೇಶ್ ಕತ್ತಿ ತಿರುಗೇಟು ನೀಡಿದ್ದಾರೆ. ನಾವು ಮಂತ್ರಿಗಳು, ಸಿಎಂ ಸರ್ಕಾರ ನಡೆಸ್ತಿದೀವಿ, ಇನ್ನೆರಡು ವರ್ಷವೂ ನಡೆಸ್ತೀವಿ.ಮುಂದಿನ ಐದು ವರ್ಷವೂ ನಾವೇ ನಡೆಸ್ತೀವಿ ಎಂದು ಹೇಳಿದರು.
ಯಡಿಯೂರಪ್ಪ ಬಿಟ್ರೆ ಬಿಜೆಪಿಯಲ್ಲಿ ಸಿಎಂ ಕ್ಯಾಂಡಿಡೇಟ್ ಯಾರಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಏಕವಚನದಲ್ಲಿಯೇ ತಿರುಗೇಟು ನೀಡಿದ ಉಮೇಶ್ ಕತ್ತಿ, ಕಾಂಗ್ರೆಸ್ನಲ್ಲಿಯೂ ಮುಖ್ಯಮಂತ್ರಿ ಆಗುವ ಯೋಗ್ಯತೆ ಯಾರಿಗೂ ಇಲ್ಲ.ಸಿದ್ದರಾಮಯ್ಯಗೂ ಇಲ್ಲ, ಡಿಕೆಶಿಗೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.