ಅನ್ಲಾಕ್ ವಿಚಾರ; ಡಿಸಿಎಂ ಅಶ್ವತ್ಥನಾರಾಯಣ ಸುಳಿವು

ಬೆಂಗಳೂರು : ರಾಜ್ಯದಲ್ಲಿ ಎಪ್ರಿಲ್ 27 ರಿಂದ ಪ್ರಾರಂಭವಾದ ಕೋವಿಡ್ ಎರಡನೇ ಅಲೆಯ ಲಾಕ್ ಡೌನ್ ಸರ್ಕಾರ ಮತ್ತೆ ಎರಡು ಬಾರಿ ವಿಸ್ತರಿಸಿ ಜೂನ್ 7 ರವರೆಗೆ ಮುಂದುವರೆದಿದೆ, ಈಗ ಜಾರಿಯಲ್ಲಿರುವ ಲಾಕ್ ಡೌನ್ ಮತ್ತೆ ವಿಸ್ತರಿಸಲಾಗುತ್ತಿದೆ ಎಂಬ ಊಹಾಪೋಹಗಳ ನಡುವೆ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅನ್ಲಾಕ್ ಮಾಡುವ ಬಗ್ಗೆ ತಜ್ಞರ ಜೊತೆ ಚರ್ಚೆ ನಡೆಯುತ್ತಿದೆ. “ನಾವು ಅನ್ ಲಾಕ್ ಮಾಡಿದಾಗ ಅದು ಎಲ್ಲರಲ್ಲಿ ಅಚ್ಚರಿ ಮೂಡಿಸುವಂತಿರಬೇಕು.” ಎಂದು ಅನ್ ಲಾಕ್ ಬಗ್ಗೆ ಸುಳಿವು ನೀಡಿದರು.
ಅನ್ ಲಾಕ್ ಮಾಡಬೇಕೋ ಅಥವಾ ಹಂತ ಹಂತವಾಗಿ ಮಾಡಬೇಕೇ ಎಂಬ ಪ್ರಶ್ನೆ ಇದೆ, ಆದರೆ ಅನ್ ಲಾಕ್ ಒಂದೇ ಬಾರಿಗೆ ಮಾಡುವ ಯಾವುದೇ ತರಾತುರಿ ಇಲ್ಲ ಈಗ ಇರುವ ಪರಿಸ್ಥಿತಿಯಲ್ಲಿ ಈ ಬಗ್ಗೆ, ತಜ್ಞರು ಮತ್ತು ಪರಿಣಿತರಿಂದ ಸರ್ಕಾರ ಅಭಿಪ್ರಾಯ ಸಂಗ್ರಹಿಸುತ್ತಿದೆ, ಮತ್ತು ಎಲ್ಲಾ ಸಾದಕ ಬಾದಕಗಳನ್ನು ಪರಿಗಣಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಶೇಕಡಾ 5 ಕ್ಕಿಂತ ಕಡಿಮೆ “ಪಾಸಿಟಿವಿಟಿದರ ಮತ್ತು ಹೊಸ ಪ್ರಕರಣಗಳ ಸಂಖ್ಯೆ 5 ಸಾವಿರ ಕ್ಕಿಂತ ಕಡಿಮೆಯಿರಬೇಕು, ರಾಜ್ಯದ ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿಯು ಪ್ರತಿದಿನ 5,000 ಕ್ಕಿಂತಲೂ ಕಡಿಮೆ ಪ್ರಕರಣದ ನಂತರ ನಿರ್ಬಂಧಗಳನ್ನು ಸಡಿಲಿಸಬಹುದು ಎಂದು ಸೂಚಿಸಿದೆ ಎಂದು ಆರೋಗ್ಯ ಸಚಿವ ಕೆ
ಸುಧಾಕರ್, ತಿಳಿಸಿದ್ದಾರೆ.