ಉತ್ತರ ಕನ್ನಡ

ದಾಂಡೇಲಿ: ನೀರ ಬಿಟ್ಟು ರಸ್ತೆ ಮೇಲೆ ಬಂತು ನೋಡಿ ಮೊಸಳೆ!

ಕಾರವಾರ : ಕೋಗಿಲಬನ ಇದು ಕಾಳಿ ನದಿ ದಂಡೆಯ ಮೇಲಿರುವ ಗ್ರಾಮ.ಕಾಳಿ ನದಿಯ ಈ ಪ್ರದೇಶದಲ್ಲಿ ಸಾಕಷ್ಟು ಮೊಸಳೆಗಳಿವೆ.ಹಾಗೆಂದು ಅವು ನೀರು ಬಿಟ್ಟು ನೆಲದ ಮೇಲೆ ಓಡಾಡುವುದು ಬಹಳ ಕಡಿಮೆ.ಬಂದರೂ ಸಣ್ಣ ಮರಿಗಳು ಬರುತ್ತಿದ್ದವು.ಆದರೆ ಬಹಳ ಅಪರೂಪವೆಂಬಂತೆ ದೊಡ್ಡದಾದ ಮೊಸಳೆಯೊಂದು ಕೋಗಿಲಬನದ ರಸ್ತೆಯಲ್ಲಿ ಆಹಾರ ಅರಸಿ ಬಂದು ರಾಜಾರೋಷವಾಗಿ ತಿರುಗಾಡು ತ್ತಿತ್ತು.ಆಗಾಗ ಬಾಯ್ದೆರೆದು ಹೆದರಿಸುತ್ತಿತ್ತು.ಮೊಸಳೆಯ ಈ ಸಂಚಾರ ಜನರನ್ನು ಭಯ ಬೀಳಿಸಿತ್ತು.

ರಸ್ತೆಯ ಅಕ್ಕ ಪಕ್ಕದ ಮನೆಯವರು ಬಾಗಿಲು ಹಾಕಿಕೊಂಡು ಮನೆಯೊಳಗೆ ಸೇರಿದ್ದರು.ಕೆಲವರು ಮರದಿಂದಲೇ ವಿಡಿಯೋ ಮಾಡುತ್ತಿದ್ದರು.

ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳೀಯರ ಸಹಕಾರದೊಂದಿಗೆ ಆ ಮೊಸಳೆಯನ್ನು ಕಾಳಿನದಿಗೆ ಹೊಂದಿಕೊಂಡಿದ್ದ ನಾಲಾದೊಳಗೆ ಸೇರುವ ಹಾಗೆ ಮಾಡಿದರು.ಮನೆಯೆದುರು ಬಂದು ಜನರನ್ನು ಭಯ ಬೀಳಿಸುತ್ತ ಸಂಚರಿಸುತ್ತಿದ್ದ ಮೊಸಳೆ ಕೊನೆಗೂ ಮತ್ತೆ ನದಿ ಸೇರುತ್ತಿದ್ದಂತೆಯೇ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.

Spread the love

Related Articles

Leave a Reply

Your email address will not be published. Required fields are marked *

Back to top button