ಉತ್ತರ ಕನ್ನಡ

ಭಟ್ಕಳ: ತಾಲೂಕು ಪತ್ರಕರ್ತರಿಗೆ ಆರೋಗ್ಯ ಕಿಟ್

ಕಾರವಾರ : ಭಟ್ಕಳ ತಾಲೂಕಿನ ಪತ್ರಕರ್ತರಿಗೆ ಮಾಜಿ ಸಚಿವ,ಹಾಲಿ ಶಾಸಕ ಆರ್. ವಿ.ದೇಶಪಾಂಡೆ ಹಾಗೂ ಮಾಜಿ ಶಾಸಕ ಮಂಕಾಳ ವೈದ್ಯರ ಮುಂದಾಳತ್ವದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಕ್ಸಿಮೀಟರ್ ಸಹಿತ ಆರೋಗ್ಯ ಕಿಟ್ ಗಳನ್ನು ವಿತರಿಸಲಾಯಿತು

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಂತೋಷ ನಾಯ್ಕ ಅವರು ಕೊರೋನಾ ಪ್ರಂಟ್ ಲೈನ್ ವಾರಿಯರ್ಸಗಳಾದ ಪತ್ರಕರ್ತರಿಗೆ ಆರೋಗ್ಯ ಕಿಟ್ ಗಳನ್ನು ವಿತರಿಸಿ ಮಾತನಾಡಿ, ಆರ್.ವಿ.ದೇಶಪಾಂಡೆಯವರ ಸೂಚನೆಯಂತೆ ಜಿಲ್ಲೆಯಾದ್ಯಂತ ಪತ್ರಕರ್ತರಿಗೆ ಆರೋಗ್ಯ ಕಿಟ್ ಗಳನ್ನು ವಿತರಿಸಲಾಗಿದ್ದು,ಇಂದು ತಾಲೂಕಿನ ಎಲ್ಲಾ ಪತ್ರಕರ್ತರಿಗೆ ಆರೋಗ್ಯ ಕಿಟ್ ಅನ್ನು ವಿತರಿಸಿದ್ದೇವೆ.ಪತ್ರಕರ್ತರು ಕೊರೋನಾ ಸಮಯದಲ್ಲಿ ತುಂಬ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ.ಇದು ಪ್ರಶಂಸೆಗೆ ಪಾತ್ರವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಬ್ದುಲ್ ಮಜೀದ್ ಮಾತನಾಡಿ,ಸರಕಾರ ಪತ್ರಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ.ಇದು ತುಂಬ ಖೇದಕಾರಿ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತರುಗಳಾದ ಸುಬ್ರಮಣ್ಯ ದಾಸನ ಕೂಡಿಗೆ, ಮನಮೋಹನ ನಾಯ್ಕ,ವಸಂತ ದೇವಾಡಿಗ,ಶಂಕರ್ ನಾಯ್ಕ,ಉಲ್ಲಾಸ್ ಶಾನಬಾಗ್,ನಸಿಮುಲ್ಲಾ ಘನಿ,ಮೋಹನ್ ನಾಯ್ಕ,ಭಾಸ್ಕರ್ ನಾಯ್ಕ, ರಾಧಾಕೃಷ್ಣ ಭಟ್ಟ,ರಾಘವೇಂದ್ರ ಹೆಬ್ಬಾರ್,ಪ್ರಸನ್ನ ಭಟ್ಟ, ಉದಯ ನಾಯ್ಕ,ಅರ್ಜುನ್ ಮಲ್ಯ,ರಾಮಚಂದ್ರ ಕಿಣಿ,ಅತಿಕು ರೆಹಮಾನ್ ಇನಾಯತ್ ಉಲ್ಲಾ,ಕುಮಾರ್ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button