ಉತ್ತರ ಕನ್ನಡ

ಭಟ್ಕಳ: ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಯಾಗಿಸುವ ಜಾಲ; ಓರ್ವನ ಬಂಧನ

ಕಾರವಾರ : ವೀಸಾ ಹೊಂದದೆ ಭಟ್ಕಳದಲ್ಲಿ ವಾಸ್ತವ್ಯ ಮಾಡಿದ ಆರೋಪಿ ಮಹಿಳೆಯನ್ನು ಪೊಲೀಸರು ಹೆಡೆಮುರಿ ಕಟ್ಟಿದ ಬೆನ್ನಲ್ಲೇ ಮತ್ತೊಂದು ಆಘಾತ ಕಾರಿ ಸುದ್ದಿ ಭಟ್ಕಳದಿಂದ ವರದಿಯಾಗಿದೆ.

ಪಾಕ್ ಹಾಗೂ ಇತರೆಡೆಗಳಿಂದ ಬರುತ್ತಿದ್ದ ಫೋನ್ ಕಾಲ್ ಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ ಮಾಡುವ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಭಟ್ಕಳದಲ್ಲಿ ಬಂಧಿಸಿ,ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.

ಭಟ್ಕಳ ತಾಲೂಕಿನ ನವಾಯತ್ ಕಾಲೋನಿಯ ತಕಿಯಾ ಸ್ಟ್ರೀಟ್ ನಿವಾಸಿ ನಿಸಾರ್ ಮಹಮ್ಮದ್ ಮುಕ್ತೇಸರ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.

ಅನಧಿಕೃತ ಟೆಲಿಫೋನ್ ಎಕ್ಸ್​​​ಚೇಂಜ್ ಮೂಲಕ ಐಎಸ್​​ಡಿ ಕರೆಗಳನ್ನು ಸ್ಥಳೀಯ ಕರೆಗಳ ನ್ನಾಗಿ ಪರಿವರ್ತಿಸುವ ಜಾಲ ವನ್ನು ಬೆಂಗಳೂರಿನ ಬಿಟಿಎಂ ಲೇಔಟ್​​​​​​​​​​ನಲ್ಲಿ ಗುರುತಿಸಿ ಈ ಸಂಬಂಧ ಇಬ್ರಾಹಿಂ ಮತ್ತು ಗೌತಮ್ ಎಂಬುವವರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.ಅವರ ಬಂಧನ ವಾಗುತ್ತಿದ್ದಂತೆ ನಿಸಾರ್ ಬೆಂಗಳೂರಿನಿಂದ ಭಟ್ಕಳಕ್ಕೆ ಬಂದಿದ್ದ ಎನ್ನಲಾಗಿದೆ.

ಆರೋಪಿ ನಿಸಾರ್ ಒಂದೇ ಬಾರಿಗೆ 32 ಸಿಮ್ ಕಾರ್ಡ್​ಗಳನ್ನು ಬಳಸುವ ಸಿಮ್ ಬಾಕ್ಸ್ ಹೊಂದಿದ್ದ ಎಂದು ತಿಳಿದು ಬಂದಿದೆ.

ಪಾಕಿಸ್ತಾನ,ಯುಎಇ ಸೇರಿದಂತೆ ವಿವಿಧ ದೇಶಗಳಿಂದ ಬರುವ ಕರೆಗಳನ್ನು ಸ್ಥಳೀಯ ಕರೆಗಳಾಗಿ ಮಾರ್ಪಾಡು ಮಾಡುವ ದಂಧೆಯಲ್ಲಿ ಆರೋಪಿಗಳು ತೊಡಗಿಸಿಕೊಂಡಿದ್ದರು.ಈ ಮೂಲಕ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದರು‌‌ ಎಂದು ಪ್ರಾಥಮಿಕ ಮಾಹಿತಿ ಯಲ್ಲಿ ಗೊತ್ತಾಗಿದೆ.

ಈಗಾಗಲೇ ಆರೋಪಿಗಳಿಂದ 30 ಎಲೆಕ್ಟ್ರಾನಿಕ್ಸ್ ಉಪಕರಣ ಗಳಲ್ಲಿ ಅಳವಡಿಸಲಾಗಿದ್ದ,960 ಸಿಮ್ ಕಾರ್ಡ್ ಗಳನ್ನು ಜಪ್ತಿ ಮಾಡಿಕೊಂಡಿದ್ದ ಎಟಿಸಿ ಅಧಿಕಾರಿಗಳು ಮತ್ತೆ ಬಿಟಿಎಂ ಲೇಔಟ್‌ನಲ್ಲಿದ್ದ ಇಬ್ರಾಹಿಂಗೆ ಸೇರಿದ ಜಾಗದಿಂದ ಇನ್ನೂ 15 ಸಿಮ್ ಬಾಕ್ಸ್‌ಗಳನ್ನು ವಶಪಡಿಸಿ ಕೊಂಡಿದ್ದಾರೆ‌ ಎಂಬ ಮಾಹಿತಿ ಲಭ್ಯವಾಗಿದೆ‌.

ಈ ಪ್ರಕರಣದಲ್ಲಿ ಬೆಂಗಳೂರಿ ನಲ್ಲಿ ಬಂಧಿತರಾಗಿರುವ ಇಬ್ರಾಹಿಂ ಹಾಗೂ ಗೌತಮ್ ಬಾಯ್ಬಿಟ್ಟ ಮಾಹಿತಿ ಆಧರಿಸಿ ಎಟಿಸಿ ತಮಿಳುನಾಡು‌ ಮೂಲದ ನಾಲ್ವರನ್ನು ವಶಕ್ಕೆ ಪಡೆದುಕೊಂಡು ಅವರನ್ನು ನಗರಕ್ಕೆ ಕರೆತಂದಿದ್ದಾರೆ.

ಇವರು ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಮಾರ್ಪಡಿಸಲು ಬೇಕಾದ ಸಿಮ್ ಕಾರ್ಡ್‌ಗಳನ್ನು ತಮಿಳುನಾಡು,ಕೇರಳ ಸೇರಿದಂತೆ ವಿವಿಧ ರಾಜ್ಯಗಳಿಂದ ಪಡೆದು ಕೋರಿಯರ್ ಮುಖಾಂತರ ತಲುಪಿಸುತ್ತಿದ್ದರು ಎಂದು ತಿಳಿದುಬಂದಿದೆ‌.ಈ ರೀತಿ ಇದುವರೆಗೂ ಎಷ್ಟು ಸಿಮ್ ಕಾರ್ಡ್‌ಗಳನ್ನು ಪಡೆಯಲಾ ಗಿದೆ ? ಈ ಕೃತ್ಯದಲ್ಲಿ ಇನ್ನಿತರರ ಪಾತ್ರಗಳ ಬಗ್ಗೆ ಆರೋಪಿ
ಗಳಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪಾಕಿಸ್ತಾನ,ದುಬೈನಿಂದ ಭಾರತೀಯ ಸೇನಾಧಿಕಾರಿಗಳ ಕಛೇರಿಗಳಿಗೆ ತಾವು ನಿವೃತ್ತ ಮಿಲಿಟರಿ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಫೋನ್ ಮಾಡುತ್ತಿದ್ದ ಅಪರಿಚಿತರು ಕರ್ನಲ್ ಸೇರಿದಂತೆ ಕೆಲ ಪ್ರಮುಖ ಮಿಲಿಟರಿ ಅಧಿಕಾರಿಗಳ ವಿಳಾಸ ಕೇಳುತ್ತಿದ್ದರು.ಉಗ್ರಗಾಮಿಗಳ ಜೊತೆ ನೇರವಾಗಿ ಸಂಪರ್ಕ ಹೊಂದಿದ್ದರಾ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ‌.

Spread the love

Related Articles

Leave a Reply

Your email address will not be published. Required fields are marked *

Back to top button