ಉತ್ತರ ಕನ್ನಡ

ಮನೆ ಎದುರಿದ್ದ ನಾಯಿಯನ್ನು ಹೊತ್ತೊಯ್ದ ಚಿರತೆ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಕಾರವಾರ : ಕಾಡುಪ್ರಾಣಿಗಳು ಇತ್ತೀಚೆಗೆ ಊರಿನತ್ತ ಬರುವುದು ಸಹಜ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಎರಡು ಚಿರತೆಗಳು ಬಂದು ಮನೆಯ ಎದುರಿಗೆ ಮಲಗಿದ್ದ ಸಾಕುನಾಯಿ ಮತ್ತು ಅದರ ಮರಿಯನ್ನು ಎತ್ತಿಕೊಂಡು ಹೋಗಿರುವ ಘಟನೆ ಈದೀಗ ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ಜನರನ್ನು ಬೆಚ್ಚಿ ಬೀಳಿಸಿದೆ.

ಕುಮಟಾ ತಾಲೂಕಿನ ಮಿರ್ಜಾನ್ ಗ್ರಾಮದ ಸಂತೆಗದ್ದೆಯ ಈಶ್ವರ ನಾಯ್ಕ ಎನ್ನುವವರ ಮನೆಗೆ ಒಂದೇ ದಿನ ಎರಡು ಚಿರತೆಗಳು ಬಂದು,ಮನೆಯೆದುರು ಮಲಗಿದ್ದ ಸಾಕು ನಾಯಿ ಮತ್ತು ಅದರ ಮರಿಯನ್ನು ಎತ್ತಿಕೊಂಡು ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

ಮನೆಯವರೆಲ್ಲರೂ ಹಾಯಾಗಿ ಮಲಗಿದ್ದ ಸಂದರ್ಭದಲ್ಲಿ ಮನೆಯಿಂದ ಹೊರಗೆ ಅಂದರೆ ಮನೆ ಎದುರಿಗೆ ಮಲಗಿದ್ದ ಸಾಕುನಾಯಿ ಮತ್ತು ಅದರ ಮರಿಯನ್ನು ಚಿರತೆಗಳು ಹೊತ್ತೊಯ್ದ ದೃಶ್ಯ ಈದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಇದರಿಂದಾಗಿ ಸುತ್ತಮುತ್ತಲಿನ ಜನತೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಚಿರತೆಗಳು ಒಮ್ಮಿಂದೊಮ್ಮೆಲೆ ಬಂದು ನಾಯಿ ಹಾಗೂ ಅದರ ಮರಿಯ ಮೇಲೆ ದಾಳಿ ಮಾಡಿ ಅವುಗಳನ್ನು ಹೊತ್ತೊಯ್ಯುತ್ತಿರುವ ದೃಶ್ಯ ಕಂಡು ಮನೆಯವರು ಕಂಗಾಲಾಗಿದ್ದಾರೆ.ಸಾಕು ನಾಯಿ ಇಲ್ಲದಿರುವುದನ್ನು ಗಮನಿಸಿದ ಮನೆಯವರು ಬೆಳಿಗ್ಗೆ ಸಿಸಿಟಿವಿ ಗಮನಿಸಿದಾಗ ಈ ದೃಶ್ಯ ಕಂಡುಬಂದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button