ಉತ್ತರ ಕನ್ನಡ: ಕೊರೋನಾ ಪಾಸಿಟಿವ್ ಪ್ರಮಾಣದಲ್ಲಿ ಏರಿಳಿತ
24x7liveKannada
Mar 15, 2023 21:47
ಕಾರವಾರ : ಹಿಂದಿನ ದಿನಕ್ಕೆ ಹೋಲಿಸಿದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೋನಾ ಪಾಸಿಟಿವ್ ಸಂಖ್ಯೆಯಲ್ಲಿ ಇಳಿಕೆಯಾಗಿದೆಯಾದರೂ ಕಳೆದ ಕೆಲ ದಿನದ ವರದಿಗಿಂತ ಇಂದು ಸ್ವಲ್ಪ ಏರಿಕೆ ಕಂಡಿದೆ.
ಇಂದು 526 ಜನರಲ್ಲಿ ಪಾಸಿಟಿವ್ ವರದಿಯಾಗಿದೆ. 2 ಜನ ಕೊರೋನಾಕ್ಕೆ ಬಲಿಯಾದ ಬಗ್ಗೆ ವರದಿಯಾಗಿದೆ.
ಉತ್ತರ ಕನ್ನಡ ಜಿಲ್ಲಾಡಳಿತದ ಕೊರೋನಾ ಹೆಲ್ತ ಬುಲೆಟಿನ್ ಪ್ರಕಾರ ಇಂದು 526 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು,2 ಜನ ಕೊರೋನಾಗೆ ಬಲಿಯಾಗಿದ್ದಾರೆ.
ಜಿಲ್ಲಾಡಳಿತದ ವರದಿ ಪ್ರಕಾರ ಕಾರವಾರದಲ್ಲಿ 46, ಅಂಕೋಲಾದಲ್ಲಿ 11, ಕುಮಟಾದಲ್ಲಿ 94,ಹೊನ್ನಾವರ 98,ಭಟ್ಕಳದಲ್ಲಿ 29, ಶಿರಸಿಯಲ್ಲಿ 69,ಸಿದ್ದಾಪುರದಲ್ಲಿ 33,ಯಲ್ಲಾಪುರದಲ್ಲಿ 41, ಮುಂಡಗೋಡ 36, ಹಳಿಯಾಳದಲ್ಲಿ 56,ಮತ್ತು ಜೋಯಿಡಾದಲ್ಲಿ 13 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಭಟ್ಕಳದಲ್ಲಿ ಒಂದು ಹಾಗೂ ಹಳಿಯಾಳದಲ್ಲಿ ಒಂದು ಸಾವು ಸಂಭವಿಸಿದೆ.ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 3117 ಆಗಿದ್ದು,ಅವರಲ್ಲಿ 361 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
2756 ಸೋಂಕಿತರು ಹೋಮ್ ಐಸೋಲೇಷನ್‌ನಲ್ಲಿದ್ದಾರೆ.
ಕಾರವಾರ 13,ಅಂಕೋಲಾ 15, ಕುಮಟಾ 34,ಹೊನ್ನಾವರ 41, ಭಟ್ಕಳ 51,ಶಿರಸಿ 148, ಸಿದ್ದಾಪುರ 210,ಯಲ್ಲಾಪುರ 21,ಮುಂಡಗೋಡ 36, ಹಳಿಯಾಳ 17,ಜೋಯಿಡಾ ದಲ್ಲಿ 53 ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ.ಅಂದರೆ ಒಟ್ಟೂ 639 ಜನ ಇಂದು ಕೊರೋನಾ ಗೆದ್ದು ಬಂದವರಾಗಿದ್ದಾರೆ.