ಉತ್ತರ ಕನ್ನಡ
ಜುಲೈ 3ಕ್ಕೆ ಮಣಿಪಾಲ್ ಆಸ್ಪತ್ರೆಯಿಂದ ಹೊನ್ನಾವರದಲ್ಲಿ ಲಸಿಕಾ ಅಭಿಯಾನ

ಕಾರವಾರ : ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯವರು ಜುಲೈ 3ರಂದು ಶನಿವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪಟ್ಟಣ ಪಂಚಾಯತ್ ಬಳಿ ಇರುವ ಹೊನ್ನಾವರದ ನ್ಯೂ ಇಂಗ್ಲೀಷ್ ಕನ್ನಡ ಮಾಧ್ಯಮ ಶಾಲೆಯಲ್ಲಿ ಬೃಹತ್ ಕೋವಿಡ್ ಲಸಿಕಾ ಅಭಿಯಾನ ನಡೆಸಲಿದ್ದಾರೆ.
ಸರ್ಕಾರ ನಿಗದಿಪಡಿಸಿದ 780 ರೂಪಾಯಿ ದರದಲ್ಲಿ ಕೋವಿಶೀಲ್ದ್ ಲಸಿಕೆಯನ್ನು ನೀಡಲಾಗುವುದು.18 ವರ್ಷ ಮೀರಿದವರೆಲ್ಲರೂ ಇದರ ಪ್ರಯೋಜನ
ಪಡೆಯಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.