ಜಿಲ್ಲಾ ಸುದ್ದಿ
ವಿದೇಶದಲ್ಲಿ ಉದ್ಯೋಗ ಮತ್ತು ವ್ಯಾಸಂಗಕ್ಕೆ ತೆರಳುವವರಿಗೆ ಲಸಿಕೆ ಅಭಿಯಾನ

ಉಡುಪಿ: ಜಿಲ್ಲೆಯಾದ್ಯಂತ ವಿದೇಶ ಉದ್ಯೋಗ ಮತ್ತು ವ್ಯಾಸಂಗಕ್ಕೆ ತೆರಳುವವರಿಗೆ ಲಸಿಕೆ ಅಭಿಯಾನ ಮಾಡಲಾಗಿದೆ.
ವಿದೇಶದಲ್ಲಿ ಶಿಕ್ಷಣ ಮಾಡುವವರಿಗೆ ಮತ್ತು ಉದ್ಯೋಗದಲ್ಲಿ ಇರುವವರಿಗೆ ಮೊದಲ ಆದ್ಯತೆ ನೀಡಲಾಗಿದ್ದು ಇದೀಗ ಅಪರ ಜಿಲ್ಲಾಧಿಕಾರಿಯವರು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿದ್ದಾರೆ. ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಹೋದರೆ ಲಸಿಕೆ ನೀಡಲಾಗುವುದು ಹಾಗೂ ಆಧಾರ್ ಕಾರ್ಡ್ ಪಾಸ್ಪೋರ್ಟ್ ವೀಸಾ ಮತ್ತು ಶೈಕ್ಷಣಿಕ ದಾಖಲೆಗಳನ್ನು ಅಗತ್ಯವಾಗಿ ತರಬೇಕು ಎಂದು ಸೂಚನೆ ನೀಡಿದ್ದಾರೆ.
ವಿದೇಶಕ್ಕೆ ತೆರಳುವವರಿಗೆ ಲಸಿಕೆ ಪಡೆಯಲು ಸರಕಾರದಿಂದ ವಿಶೇಷ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಮಾಡಲಾಗುವುದು ಎಂದು ಹೇಳಿದ್ದಾರೆ.