ಜಿಲ್ಲಾ ಸುದ್ದಿ
ಕೊಡ್ಲಿಪೇಟೆ ಗ್ರಾಮಪಂಚಾಯ್ತಿ ವಾಟರ್ಮನ್ ನದಿಗೆ ಹಾರಿ ಆತ್ಮಹತ್ಯೆ

ಕೊಡ್ಲಿಪೇಟೆ ಗ್ರಾಮ ಪಂಚಾಯತ್ ನೀರು ಗಂಟಿ (ವಾಟರ್ ಮ್ಯಾನ್ )ಮಣಿಮುತ್ತು (34) ಇಂದು ಶಿವಪುರ ಸಮೀಪವಿರುವ ಹೇಮಾವತಿ ನದಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ.
ಗ್ರಾಮ ಪಂಚಾಯತ್ ನೀರು ಸರಭರಾಜುವ ಮಾಡುವ ಪಂಪ್ ಹೌಸ್ ಸಮೀಪ ಈ ಘಟನೆ ನಡೆದಿದೆ. ಪತ್ನಿ ಸರಶ್ವತಿ ದೂರಿನ ಮೇರೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸೋಮವಾರಪೇಟೆ ಆಗ್ನಿ ಶಾಮಕ ದಳದ ಸಿಬ್ಬಂದಿ ನದಿಯಲ್ಲಿ ಶೋದಿಸುತ್ತಿದ್ದು ಸಂಜೆಯವರೆಗೂ ಮೃತದೇಹ ಸಿಕ್ಕಿಲ್ಲ,
ಮಾದಪುರ ಹಾಗೂ ಸ್ಥಳಿಯ ಮುಳುಗು ತಙ್ಞರು ಸ್ಥಳಕ್ಕಾಗಮಿಸಿದ್ದಾರೆ. ಶನಿವಾರಸಂತೆ ಪೊಲೀಸ್ ವೃತ್ತ ನಿರಿಕ್ಷಕ ಪರಶಿವ ಮೂರ್ತಿ. ಠಾಣಾಧಿಕಾರಿ ಪೊಲೀಸ್ ಠಾಣಾಧಿಕಾರಿ ದೆವರಾಜ್.ಹಾಗೂ ಠಾಣೆಯ ಸಿಬ್ಬಂದಿಗಳು, ಗ್ರಾ.ಪಂ.ಅದ್ಯಕ್ಷರು .ಸದಸ್ಯರುಗಳು . ಪಿ.ಡಿ.ಯೋ.ಪಂಚಾಯತ್ ಸಿಬ್ಬಂದಿಗಳು, ಮೃತನ ಕುಟುಂಬಸ್ಥರು ಸ್ಥಳದಲ್ಲಿ ಉಪಸ್ಥಿತರಿದ್ದಾರೆ.