ಉತ್ತರ ಕನ್ನಡಜಿಲ್ಲಾ ಸುದ್ದಿ

ಭಟ್ಕಳ : ಕಲ್ಪನಾ ಮಹಾಲೆ ಕೊಲೆ ಪ್ರಕರಣ ; ಮೇಲ್ಮನವಿ ವಜಾಗೊಳಿಸಿದ ಧಾರವಾಡ ಹೈಕೋರ್ಟ್

ಕಾರವಾರ : ಭಟ್ಕಳ ತಾಲೂಕಿನ ಸಾಗರ ರಸ್ತೆಯ ಕೋಣಾರ ಗುಡ್ಡದ ನಿರ್ಜನ ಪ್ರದೇಶದಲ್ಲಿ 2012 ರಲ್ಲಿ ನಡೆದಿದ್ದ ಕಲ್ಪನಾ ಮಹಾಲೆ ಕೊಲೆ ಪ್ರಕರಣ ಸಂಬಂಧ ಜಿಲ್ಲಾ ನ್ಯಾಯಾಲಯ ಪ್ರಕಟಿಸಿದ್ದ ತೀರ್ಪನ್ನು ಧಾರವಾಡ ಹೈಕೋರ್ಟ್ ಎತ್ತಿ ಹಿಡಿದಿದೆ.

2012 ರ ನವೆಂಬರ್ 4 ರಂದು ಕಲ್ಪನಾ ಮಹಾಲೆ ಎನ್ನುವ ಮಹಿಳೆಯ ಕೊಲೆ ನಡೆದಿತ್ತು. ಪ್ರಕರಣದಲ್ಲಿ ತಾಲೂಕಿನ ಮುಂಡಳ್ಳಿಯ ಸದಾಶಿವ ನಾಯ್ಕ ಹಾಗೂ ನಾಗರಾಜ ನಾಯ್ಕ ಎನ್ನುವವರನ್ನು ಬಂಧಿಸಲಾಗಿತ್ತು. ವಿಚಾರಣೆ ನಡೆಸಿದ್ದ ಅಂದಿನ ಜಿಲ್ಲಾ ನ್ಯಾಯಾಧೀಶ ವಿ.ಎಸ್.ಧಾರವಾಡಕರ್ ಆರೋಪಿಗಳನ್ನು ದೋಷಮುಕ್ತ ಮಾಡಿ 2018 ರ ಮಾರ್ಚ್ 26 ರಂದು ಆದೇಶ ಹೊರಡಿಸಿದ್ದರು.

ಮೃತ ಮಹಿಳೆ ಕಲ್ಪನಾ ಮಹಾಲೆ

ಈ ಸಂಬoಧ ಸರ್ಕಾರ ಹೈಕರ್ಟ್​​ನಲ್ಲಿ ಪ್ರಶ್ನಿಸಿದ್ದು, ವಿಡಿಯೋ ಕಾನ್ಛರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾಧೀಶ ಜೆ.ಎಂ.ಖಾಜೀ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾ ಮಾಡಿ, ಕಾರವಾರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರು ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ. ಆರೋಪಿಗಳ ಪರವಾಗಿ ಕುಂದಾಪುರದ ವಕೀಲ ರವಿಕಿರಣ ಮುರ್ಡೇಶ್ವರ್​ ವಾದಿಸಿದ್ದರು

Spread the love

Related Articles

Leave a Reply

Your email address will not be published. Required fields are marked *

Back to top button