ಜಿಲ್ಲಾ ಸುದ್ದಿ
ಮ್ಯಾನ್ಹೋಲ್ನಲ್ಲಿ ಬಿದ್ದು ಮೃತರಾದ ಕಾರ್ಮಿಕರು; ಕುಟುಂಬದವರಿಗೆ ಡಿಕೆ ಸುರೇಶ್ ಸಾಂತ್ವನ

ರಾಮನಗರ: ಮ್ಯಾನ್ ಹೋಲ್ ಕೆಲಸ ಮಾಡುವ ವೇಳೆ ಮೃತಪಟ್ಟ ಮೂವರು ಪೌರಕಾರ್ಮಿಕರ ಕುಟುಂಬದವರಿಗೆ ಸಂಸದರಾದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಜಿಪಂ ಮಾಜಿ ಅಧ್ಯಕ್ಷರಾದ ಶ್ರೀ ಇಕ್ಬಾಲ್ ಹುಸೇನ್ ಸಾಂತ್ವನ ಹೇಳಿದರು.
ಆಸ್ಪತ್ರೆಗೆ ಬೇಟಿ ನೀಡಿ ಕುಟುಂಬದವಡೊಡನೆ ಅವರು ಮಾತನಾಡಿದರು. ಕೂಡಲೇ ಗುತ್ತಿಗೆದಾರನ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಸದ ಡಿ.ಕೆ. ಸುರೇಶ್ ಸೂಚಿಸಿದರು.