ಬಾಲಿವುಡ್ಮನರಂಜನೆ

ಬಾಲಿವುಡ್ ನಟ ಶಿವಕುಮಾರ್ ಸುಬ್ರಮಣಿಯಂ ಇನ್ನಿಲ್ಲ

1989ರಿಂದ ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟ ಶಿವಕುಮಾರ್ ಸುಬ್ರಮಣಿಯಂ ಇಂದು ವಿಧಿವಶರಾಗಿದ್ದಾರೆ. ಇಂದು ಮುಂಜಾನೆ ಶಿವಕುಮಾರ್ ಸುಬ್ರಮಣಿಯಂ ನಿಧನ ಹೊಂದಿದ್ದು ಅವರ ಸಾವಿಗೆ ಯಾವುದೇ ಕಾರಣ ತಿಳಿದುಬಂದಿಲ್ಲ.

ಕೇವಲ ಎರಡು ತಿಂಗಳ ಹಿಂದೆ ಶಿವಕುಮಾರ್ ಸುಬ್ರಮಣಿಯಂ ಪುತ್ರ ಬ್ರೈನ್ ಟ್ಯೂಮರ್ ನಿಂದ ನಿಧನ ಹೊಂದಿದ್ದರು. ಮಗನ ಸಾವಿನ ನೋವಿನಲ್ಲಿದ್ದ ನಟ ಇಂದು ನಿಧನ ಹೊಂದಿರುವುದು ಇಡೀ ಕುಟುಂಬ ಶೋಕಕ್ಕೆ ತುತ್ತಾಗುವಂತೆ ಮಾಡಿದೆ. 2 ಸ್ಟೇಟ್ಸ್, ಮೀನಾಕ್ಷಿ ಸುಂದರೇಶ್ವರ್, ನೇಲ್ ಪಾಲಿಶ್, ಹಿಚ್ಕಿ ಸೇರಿದಂತೆ ಸಾಕಷ್ಟು ಬಾಲಿವುಡ್ ಸಿನಿಮಾಗಲ್ಲಿ ಶಿವಕುಮಾರ್ ಸುಬ್ರಮಣಿಯಂ ನಟಿಸಿದ್ದರು. ಕಥೆ, ಚಿತ್ರಕಥೆ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದ ಶಿವಕುಮಾರ್ ಸುಬ್ರಮಣಿಯಂ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಾಕಷ್ಟು ಬಾಲಿವುಡ್ ಸೆಲೆಬ್ರಿಟಿಗಳು ಪ್ರಾರ್ಥಿಸಿದ್ದಾರೆ.

Spread the love

Related Articles

Leave a Reply

Your email address will not be published.

Back to top button