‘ಆಕಾಶವೆ ಬೀಳಲೆ ಮೇಲೆ’ ಹಾಡು ನೆನಪಿಸಿದ ಶಿವಣ್ಣ!

ಪೂರ್ಣ ವಿ-ರಾಮ
ವರನಟ ರಾಜ್ ಕುಮಾರ್ ಬೆಸ್ಟ್ ಹಾಡುಗಳಲ್ಲಿ ಒಂದು-ಆಕಾಶವೆ ಬೀಳಲಿ ಮೇಲೆ…ಸಿದ್ಧಲಿಂಗಯ್ಯ ನಿರ್ದೇಶನದ ನ್ಯಾಯವೇ ದೇವರು ಚಿತ್ರದ ಈ ಹಾಡಿಗೆ ಗೀತ ಗುಚ್ಛ ಹೆಣೆದವರು ಮ್ಯೂಸಿಕ್ ಮಾಂತ್ರಿಕರಾದ ರಾಜನ್ ನಾಗೇಂದ್ರ. ಹಾಡುಗಳಿಂದಲೇ ಒಂದು ಸಿನೆಮಾಗೆ ಜೀವ ತುಂಬೋ ತಾಕತ್ತು ಅಂತ ಇದ್ದರೆ ಅದು ರಾಜನ್ ನಾಗೇಂದ್ರ ಜೋಡಿಗೆ ಎನ್ನುವಷ್ಟು ಜನಪ್ರಿಯತೆಯ ಉತ್ತುಂಗ ಏರಿದ್ದ ಈ ಗೀತ ಜೋಡಿಯ ಸಂಗೀತಕ್ಕೆ ಸ್ವರ ಪೂಜೆಯ ಮೂಲಕ ಹಾಡಿಗೆ ದೈವ ಕಳೆ ತಂದಿದ್ದು ಕಂಠ ಬ್ರಹ್ಮ ಪಿ ಬಿ ಶ್ರೀನಿವಾಸ್.
ಅದೇ ಹಾಡು ಇದೀಗ ಅಭಿಮಾನಿಯ ಎದೆಯಂಗಳಲದಲ್ಲಿ ಮತ್ತೆ ರಂಗೋಲಿ ಇಡಲು ಶುರುಮಾಡಿದೆ. ಅದಕ್ಕೆ ಕಾರಣ ರಾಜರ ಹಿರಿಮಗ ಶಿವರಾಜ್ ಕುಮಾರ್.
ಹೌದು, ಶಿವರಾಜ್ ಕುಮಾರ್ ಅದೇ ಆಕಾಶವೆ ಬೀಳಲಿ ಮೇಲೆ ಹಾಡನ್ನು ಮೊಬೈಲ್ ಕರೋಕೆ ಮೂಲಕ ಹಾಡುವ ಮೂಲಕ ಆ ಹಾಡಿನ ಘನತೆಗೆ ಮತ್ತಷ್ಟು ಗೌರವ ತಂದಿದ್ದಾರೆ. ಪಾರ್ಕ್ ಒಂದರಲ್ಲಿ ಗೀತಾ ಶಿವರಾಜ್ ಕುಮಾರ್ ಜೊತೆ ಟೀ ಹೀರ ಹೀರುತ್ತಾ ಆ ಹಾಡಿಗೆ ಧ್ವನಿಗೂಡಿದ್ದಾರೆ ಹ್ಯಾಟ್ರಿಕ್ ಹೀರೋ!
ಡೈಲಿ ವಾಕಿಂಗ್, ಫ್ರೆಂಡ್ಸ್ ಜೊತೆ ಚಾಟಿಂಗ್!
ಶಿವರಾಜ್ ಕುಮಾರ್ ಇತ್ತೀಚೆಗೆ ಮಾರ್ನಿಂಗ್ ಸಮಯವನ್ನು ಹಾಗೆ ಕಳೆಯುತ್ತಿದ್ದಾರೆ. ಒಂದಷ್ಟು ಸ್ನೇಹಿತರ ಜೊತೆ ಕಿಲೋಮೀಟರ್ ಗಟ್ಟಲೇ ವಾಕ್ ಹೋಗುವುದು, ಜೊತೆಗೆ ಒಂದಷ್ಟು ಹಾಡು-ಹರಟೆ ಸೆಷನ್ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಅದೇ ಸೆಷನ್ ನ ಮುಂದುವರಿದ ಭಾಗದಂತೇ ಇದೀಗ ನ್ಯಾಯವೇ ದೇವರು ಎನ್ನುವ ಎಪ್ಪತ್ತರ ದಶಕದಲ್ಲಿ ಹೊರಬಂದು ಹಿಟ್ ಆದ ಹಾಡಿಗೆ ಧ್ವನಿ ಜೋಡಿಸಿದ್ದಾರೆ. ಚಿ.ಉದಯಶಂಕರ್ ವಿರಚಿತ ಗೀತೆಯನ್ನ ಮರು ನೆನಪು ಮಾಡಿಕೊಟ್ಟಿದ್ದಾರೆ. ಶಿವಣ್ಣಆ ಹಾಡು ಹಾಡುವಾಗ ಗೀತಾ ಶಿವರಾಜ್ ಕುಮಾರ್ ಕೂಡ ಜೊತೆಗಿದ್ದಾರೆ!