ಟೈಗರ್ ಶ್ರಾಫ್ ಅಂದ್ರೆ ಇಲ್ಲಿನೋರಿಗೂ ಇಷ್ಟ!

ಪೂರ್ಣ ವಿ-ರಾಮ
ಹಿಂದಿ ಚಿತ್ರರಂಗದ ಯಂಗ್ ಬ್ಲಡ್, ಜಾಕಿ ಶ್ರಾಫ್ ಅಂದ್ರೆ ಸೌತ್ ಸ್ಟಾರ್ ಗಳಿಗೂ ಇಷ್ಟವೋ ಇಷ್ಟ!
ಹೌದು, ಹಿಂದಿ ಚಿತ್ರರಂಗದಲ್ಲಿ ತನ್ನದೇ ಆದ ಹೆಸರು ಮತ್ತು ಛಾಪು ಮೂಡಿಸುತ್ತಿರೋ ಎಂಬ ಒಂದಾನೊಂದು ಕಾಲದಿಂದಲೂ ಹೀರೋ ಮೆಟಿರಿಯಲ್ ಆಗಿರೋ ಶಾಕಿ ಶ್ರಾಫ್ ಮಗನೆಂದರೆ ತಮಿಳಿನ ಖ್ಯಾತ ನಟ ವಿಜಯ್ ಅವರಿಗೂ ಹೆವೀ ಇಷ್ಟವಂತೆ!
ಅದನ್ನ ಖುದ್ದು ವಿಜಯ್ ಅವರೇ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು. ಹೇಳಿಕೊಂಡು ಟೈಗರ್ ಶ್ರಾಫ್ ಗತ್ತಿನ ನಟನೆ ಮತ್ತು ಬಾಡಿ ಲಾಂಗ್ಬೇಜ್ ಅನ್ನು ಹಾಡಿ ಹೊಗಳಿದ್ದಾರೆ.
ಎದ್ದು ನಿಂತು ಚಪ್ಪಾಳೆ ತಟ್ಟುವಷ್ಟು ಕ್ರೇಜ್!
ವಿಜಯ್ ಅವರಿಗೆ ಟೈಗರ್ ಶ್ರಾಫ್ ಚಿತ್ರ ನೋಡಿದಾಗ ಹಾಗೆ ಎನ್ನಿಸಿತಂತೆ. ಆ ಥರದ ಎಂಟ್ರಿ ಬಲು ಅಪರೂಪ. ನೋಡಿದರೆ ಥ್ರಿಲ್ ಎನಿಸುವಂತಿರುತ್ತದೆ ಅವರ ಫರಫಾರ್ಮೆನ್ಸ್ ಮತ್ತು ಎಂಟ್ರಿ. ಅದೇ ಕಾರಣಕ್ಕೆ ಅವರೆಂದರೆ ತನಗಿಷ್ಟ ಎಂದಿದ್ದಾರೆ ತಮಿಳಿನ ಹೆಸರಾಂತ ನಟ ಇಳೆಯ ದಳಪತಿ ವಿಜಯ್!
ಮಹೇಶ್ ಬಾಬು ಮಕ್ಕಳಿಗೂ ಇಷ್ಟ!
ಟೈಗರ್ ಶ್ರಾಫ್ ಎಂದರೆ ತಮಿಳಿನ ಇನ್ನೊಬ್ಬ ಟಾಪ್ ಸ್ಟಾರ್ ಮಹೇಶ್ ಬಾಬು ಅವರ ಮಕ್ಕಳಿಗೂ ಇಷ್ಟವಂತೆ. ಬಿಡುವಿದ್ದಾಗೆಲ್ಲಾ ಬಾಬು ಮಕ್ಕಳು ಟೈಗರ್ ಶ್ರಾಫ್ ಫೈಟಿಂಗ್ ವೀಡಿಯೋಗಳನ್ನೇ ನೋಡುತ್ತಿರುತ್ತಾರಂತೆ. ಜೊತೆಗೆ ಮಹೇಶ್ ಬಾಬು ಸಹ ಮಕ್ಕಳ ಜೊತೆ ಟೈಗರ್ ಸಿನೆಮಾವನ್ನ ನೋಡುತ್ತಾರಂತೆ.
ಅಪ್ಪನಂತೇ ಮಗ!
ಹಿಂದಿನ ಹಿಂದಿ ಜಮಾನದಲ್ಲಿ ಜಾಕಿ ಶ್ರಾಫ್ ಕೂಡ ಸೌತ್ ಇಂಡಿಯಾ ಮಂದಿಗೆ ಇಷ್ಟವಾಘುತ್ತಿತ್ತರು. ಅವರದೇ ಆದ ಟಿಪಿಕಲ್ ನಟನೆಯಿಂದ ಎಲ್ಲರ ಗಮನ ಸೆಳೆದಿದ್ದರು. ಕನ್ನಡದ ಜಮಾನಾ ಎಂಬ ಚಿತ್ರದಲ್ಲೂ ನಟಿಸಿದ್ದ ಜಾಕಿ ಶ್ರಾಫ್, ಪುನೀತ್ ಜೊತೆ ಅಣ್ಣಾ ಬಾಂಡ್ ಸಿನೆಮಾದಲ್ಲಿ ನಟಿಸಿದ್ದರು. ಪುನೀತ್ ಸಹ ಜಾಕಿ ಅಂಕಲ್ ಅಂದರೆ ಸಿಕ್ಕಾಪಟ್ಟೆ ಇಷ್ಟ ಎಂದಿದ್ದರು. ಇದೀಗ ಅವರ ಮಗ ಟೈಗರ್ ಶ್ರಾಫ್ ಸೌತ್ ಇಂಡಿಯಾ ನಟರ ಅಚ್ಚುಮೆಚ್ಚಾಗಿದ್ದಾನೆ. ಅಪ್ಪನಂತೇ ಮಗ ಎಂದೆನಿಸಿಕೊಂಡು ಟಾಪ್ ಸ್ಟಾರ್ ಗಳ ಫೇವರೇಟ್ ಆಗಿದ್ದಾನೆ!
ಶ್ರಾಫ್ ಸನ್ ಟಾಪ್ ಸ್ಟಾರೇನಲ್ಲ!
ಹಾಗಂತ ಜಾಕಿ ಶ್ರಾಫ್ ಮಗ ನೂರಾರು ಸಿನೆಮಾ ಏನೂ ಮಾಡಿಲ್ಲ. ಮಾಡಿರೋದು ಇಪ್ಪತ್ತೈದರ ಒಳಗಷ್ಟೇ. ಜಾಕಿ ಶ್ರಾಫ್ ಕೂಡ ಹಾಗೇ ಇದ್ದರು. ದೊಡ್ಡ ದೊಡ್ಡ ನಟರ ಜೊತೆ ಸಣ್ಣ ಪುಟ್ಟ ಪಾತ್ರಗಳನ್ನು ಮಾಡಮಾಡುತ್ತಾ ಇಡೀ ಇಂಡಿಯಾ ಗಮನ ಸೆಳೆದರು. ಜೊತೆಗೆ ಬೇರೆ ಬೇರೆ ಭಾಷೆಯ ನಟರಿಗೆ ಫೇವರೇಟ್ ಎನಿಸಿಕೊಂಡರು. ಮಗ ಟೈಗರ್ ಕೂಡ ವಾರ್ ಥರದ ಮಲ್ಟಿ ಸ್ಟಾರ್ ಕಾಂಬಿನೇಷನ್ ಚಿತ್ರದಲ್ಲೂ ನಟಿಸಿ ಗೆಲುವು ದಾಖಲಿಸುತ್ತಾ ಸೌತ್ ಇಂಡಿಯಾ ಸ್ಟಾರ್ ಗಳ ಫೇವರೇಟ್ ಆಗುತ್ತಿದ್ದಾರೆ. ಅಪ್ಪನಂತೇ ಮಗ ಎನಿಸಿಕೊಂಡಿದ್ದಾರೆ!