ರಾಜ್ಯಸಿನಿಮಾ

ಚಿತ್ರರಂಗದ ಕಲಾವಿದರಿಗೆ ಸೋಮವಾರ ಲಸಿಕೆ

ಕನ್ನಡ ಚಿತ್ರರಂಗದ ಕಲಾವಿದರಿಗೆ ಸೋಮವಾರ ಕೊರೊನಾ ರಕ್ಷಣೆಯ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

18 ವರ್ಷ ದಾಟಿದ ಚಿತ್ರರಂಗದಲ್ಲಿ ದುಡಿದ ಕಲಾವಿದರು ಹಾಗೂ ಇತರ ಸಂಬಂಧಪಟ್ಟವರಿಗೆ ಮೇ 31ರ ಸೋಮವಾರ ಹಾಗೂ ಜೂನ್ ಒಂದರ ಮಂಗಳವಾರ ಬೆಳಿಗ್ಗೆ 10ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದಲ್ಲಿ ಕೋವಿಶೀಲ್ಡ್ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ.

ಲಸಿಕೆ ಹಾಕಿಸಿಕೊಳ್ಳಲು ಹಾಜರಾಗುವವರು ಆಧಾರ್ ಕಾರ್ಡ್ ನ ಜೊತೆ ಬರಬೇಕು. ಮಾಸ್ಕ್ ಹಾಕಿಕೊಳ್ಳುವುದು; ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಈ ಸಂದರ್ಭದ ನಿಯಮವಾಗಿದೆ.

ಸೋಮವಾರ 11.30ರ ಸಮಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್, ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನಿಲ್ ಪುರಾಣಿಕ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಟ ದೊಡ್ಡಣ್ಣ, ಬಿಬಿಎಂಪಿ ಕಮಿಷನರ್, ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ನಟಿ ಹಾಗೂ ನಿರ್ದೇಶಕಿ ರೂಪಾ ಅಯ್ಯರ್ ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button