ಪ್ರಜಾಕೀಯ ಐ ಲೈಕ್ ಇಟ್ ಎಂದ್ರಾ ದರ್ಶನ್?!

ಪೂರ್ಣ ವಿ-ರಾಮ
ಉಪೇಂದ್ರ ಉಸ್ತುವಾರಿಯ ಪ್ರಜೆಗಳೇ ಸೇರಿ ಕಟ್ಟಿರುವ ಪಕ್ಷ ಎಂದು ಖುದ್ದು ಅವರೇ ಹೇಳಿಕೊಳ್ಳುವ ಪ್ರಜಾಕೀಯ ಪಕ್ಷಕ್ಕೆ ನಟ ದರ್ಶನ್ ಬೆಂಬಲ ವ್ಯಕ್ತಪಡಿಸಿದರಾ?
ಹೌದು ಎನ್ನುತ್ತಿದೆ ಸಾಮಾಜಿಕ ಜಾಲತಾಣದ ಒಂದು ಮೂಲ. ವಿಷಯ ಇಷ್ಟೇ… ಉಪೇಂದ್ರ ಅವರು ಪ್ರಜಾಕೀಯ ಪಕ್ಷಕ್ಕೆ ನಿಮ್ಮ ಬೆಂಬಲ ಇದೆಯಾ ಎಂಬ ಪೋಸ್ಟ್ ಹಾಕಿದ್ದಾರೆ. ಅದಕ್ಕೆ ನಟ ದರ್ಶನ್ ಅವರ official ಖಾತೆಯಿಂದ ಒಂದು ಲೈಕ್ ಬಿದ್ದಿದೆ. ಅಷ್ಟೇ ಎಂದುಕೊಂಡರೆ ಅದು ಅಷ್ಟೇ… ಆದರೆ ಅಭಿಮಾನಿಗಳ ಪಾಲಿಗೆ ಇದು ಹೋಳಿಗೆ ತುಪ್ಪದ ಡಿನ್ನರ್. ಉಪೇಂದ್ರ ಅವರ ಅಭಿಮಾನಿಗಳಿಗೆ ಇದು ಹಬ್ಬವಾದರೆ, ದರ್ಶನ್ ಅಭಿಮಾನಿಗಳಿಗೆ ಇದು ಖುಷಿಯ ವಿಚಾರ. ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ಬ್ರ್ಯಾಂಡ್ ಮತ್ತು ರೀಚ್ ಹೊಂದಿರುವ ಜನಪ್ರಿಯ ನಟರಲ್ಲಿ ದರ್ಶನ್ ಕೂಡ ಒಬ್ಬರು. ಅವರು ಹೀಗೆ ಎಂದು ಒಂದು ವಿಷಯ ಹರಿಬಿಟ್ಟರೆ ಅದು ಸಾವಿರಾರು ಶೇರ್ ಆಗುತ್ತದೆ. ಲಕ್ಷಾಂತರ ಲೈಕ್ ಆಗುತ್ತದೆ. ಕೋಟ್ಯಂತರ ರೀಚ್ ಆಗುತ್ತದೆ.
ರಾಜಕೀಯದಿಂದ ದರ್ಶನ್ ದೂರ!
ಹಾಗಂತ ದರ್ಶನ್ ಅವರಿಗೂ ರಾಜಕೀಯಕ್ಕೂ ದೂರದೂರ. ಎಲೆಕ್ಷನ್ ಸಮಯದಲ್ಲಿ ಅವರು ವ್ಯಕ್ತಿಯ ಪರ ಪ್ರಚಾರ ಮಾಡುವುದೇ ಹೆಚ್ಚು. ಒಂದು ಪರ್ಟಿಕ್ಯುಲರ್ ಪಕ್ಷದ ಪರ ಇಲ್ಲವೇ ಇಲ್ಲ!
ಸುಮಲತಾ ಅಂಬರೀಶ್, ಪ್ರಜ್ವಲ್ ರೇವಣ್ಣ, ಮುನಿ ರತ್ನ ಹೀಗೆ ಅವರಿಗೆ ಯಾರು ಪರ್ಸನಲೀ ಇಷ್ಟವೋ ಅವರ ಪರವಷ್ಟೇ ದರ್ಶನ್ ಪ್ರಚಾರ ಮಾಡಿದ್ದಾರೆ. ವಿಷಯ ಹೀಗಿರುವಾಗ ಅವರು ಪ್ರಜಾಕೀಯ ಪಕ್ಷದ ಪೋಸ್ಟ್ ಲೈಕ್ ಮಾಡಿದ್ದಾರೆ ಎಂದರೆ ಉಪೇಂದ್ರ ಅಭಿಮಾನಿಗಳಿಗೆ ಡಬಲ್ ಖುಷಿಯಾಗಿರುತ್ತದೆ ಅಲ್ಲವೇ ಕಾಂತಾ?
ಐ ಲೈಕ್ ಇಟ್ ಕಾಂತಾ ಐ ಲೈಕ್ ಇಟ್!