ಹಂಸರಿಗೆ ಬಯಾಗ್ರಫಿ ಬರೆಯೋಕೆ ಭಯವಂತೆ!

-ಪೂರ್ಣ ವಿ-ರಾಮ
ಹಂಸಲೇಖ ಪ್ರತೀ ಪದದಲ್ಲಿ ಪಂಚ್ ಮಾಡೋದರಲ್ಲಿ ಎತ್ತಿದ ಕೈ. ಅದೇ ಕಾರಣಕ್ಕೆ ಅವರು ಸಪರೇಟ್ ಸಾಲಿನಲ್ಲಿ ನಿಲ್ಲುತ್ತಾರೆ. ಮಾತನ್ನೇ ಸಾಲಾಗಿಸಿ, ಆ ಸಾಲುಗಳಿಂದಲೇ ಸಂಗೀತ ಮೂಡಿಸುವ ಶಕ್ತಿ ಅವರಲ್ಲಿದೆ, ಅದೇ ಕಾರಣಕ್ಕೆ ಅವರು ನಾದ ಬ್ರಹ್ಮ, ಸಂಗೀತ ಸಾರ್ವಭೌಮ!
ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಹಂಸಲೇಖ ಯಾಕೆ ತಮ್ಮ ಬಯಾಗ್ರಫಿ ಬರೆದಿಲ್ಲ ಅಂತ ಅಭಿಮಾನಿಯೊಬ್ಬ ಪ್ರಶ್ನೆ ಕೇಳಿದ್ದಕ್ಕೆ ಅವರು ಕೊಟ್ಟ ಉತ್ತರ-ಬರೆಯೋಕೆ ಭಯ ಕಣಪ್ಪ!
ಇದೇ ನೋಡಿ ನಿಜವಾದ ಬ್ಯೂಟಿ. ಹಂಸಲೇಖ ಸಾಧನೆಯ ಶಿಖರ. ತಾವು ಎಷ್ಟೇ ಸಾಧನೆ ಮಾಡಿದ್ದರೂ ತಾನು ಇನ್ನೂ ಮಾಡುವುದು ಸಾಕಷ್ಟಿದೆ ಎನ್ನುವವನು ನಿಜವಾದ ಸಾಧಕ. ಸಂಗೀತ ಕ್ಷೇತ್ರದಲ್ಲಿ ಇಷ್ಟೆಲ್ಲಾ ಸಾಧಿಸಿದ್ದರೂ, ಪಿಕ್ಚರ್ ಅಭಿ ಬಾಕಿ ಹೈ ಅನ್ನೋ ಆ ಗುಣಕ್ಕೇ ಅವರು ಲೆಜೆಂಡ್!
ಮುಂದಿನ ವರ್ಷ ಬಯಾಗ್ರಫಿ!
ಅಂದಹಾಗೆ ಹಂಸಲೇಖ ಮುಂದಿನ ವರುಷ ತಮ್ಮ ಬಯಾಗ್ರಫಿ ಬರೀತಾರಂತೆ. ಅವರ ಕನಸಿನ ಕೂಸು-ದೇಸಿ ಸಂಸ್ಥೆಯ ಇನ್ನೊಂದಿಷ್ಟು ಕೆಲಸ ಬಾಕಿ ಇದೆಯಂತೆ. ಆ ವೇದಿಕೆಯನ್ನು ಫೈನ್ ಟ್ಯೂನ್ ಮಾಡುವ ಕೆಲಸ ಮುಗಿಸಿದ ನಂತರವೇ ಬಯಾಗ್ರಫಿ ಬರೆಯೋದಂತೆ. ಇದು ಹಂಸಲೇಖ ಹೃದಯ ಊವಾಚ!