ಮನರಂಜನೆಸಿನಿಮಾಸೆಲೆಬ್ರಿಟಿ

ಪೇಂಟರ್ ಆಗಿದ್ದಾರೆ ಜಾಹ್ನವಿ ಕಪೂರ್!

ನಟಿ ಜಾಹ್ನವಿ ಕಪೂರ್ ಇತ್ತೀಚೆಗೆ ಏನು ಮಾಡುತ್ತಿದ್ದಾರೆ? ಅವರು ಪೇಂಟಿಂಗ್ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ.

ತಮ್ಮ ಇತ್ತೀಚಿನ ಪೇಂಟಿಂಗ್​ಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರು ಹಂಚಿಕೊಂಡಿದ್ದಾರೆ. ಚಿತ್ರವೊಂದನ್ನು ಪೋಸ್ಟ್ ಮಾಡುವುದರ ಜೊತೆಗೆ, ನನ್ನನ್ನು ಪೇಂಟರ್ ಎಂದು ಕರೆದರೆ? ಎಂಬ ಪ್ರಶ್ನೆಯೂ ಇದೆ.

ಅದಕ್ಕೆ ಹಲವರು ಹಲವು ಬಗೆಯಲ್ಲು ಪ್ರತಿಕ್ರಿಯಿಸಿದ್ದಾರೆ.

ದಿಯಾ ಮಿರ್ಜಾ ಹೇಳಿರುವುದು ಹೀಗೆ: “ಮಗಳಂತೆ ತಾಯಿಯಂತೆ. ಚಿತ್ರಕಲೆ ಮುಂದುವರಿಸಿ.”

ಜಾನ್ವಿಯ ರೂಹಿ ಸಹನಟ ವರುಣ್ ಶರ್ಮಾ ಹೀಗೆ ಬರೆದಿದ್ದಾರೆ: “ವಾಹ್! ನೀವು ನನಗೆ ಯಾವುದನ್ನು ಉಡುಗೊರೆಯಾಗಿ ನೀಡುತ್ತಿದ್ದೀರಿ?”

ಅಭಿಮಾನಿಯೊಬ್ಬರು ಹೀಗೆ ಬರೆದಿದ್ದಾರೆ: “ವಾಹ್.” ಮತ್ತೊಬ್ಬ ಅಭಿಮಾನಿ, “ಖಂಡಿತವಾಗಿಯೂ ನೀವು ಪೇಂಟರ್”.

ಇತರ ಅಭಿಮಾನಿಗಳಿಂದಂತೂ ಹಾರ್ಟ್ ಎಮೋಜಿಗಳ ಮಹಾಪೂರವೇ ಹರಿದುಬಂದಿದೆ.

Spread the love

Related Articles

Leave a Reply

Your email address will not be published. Required fields are marked *

Back to top button