ಕನ್ನಡದ ಹೆಮ್ಮೆಯ ಕೆಜಿಎಫ್ಗೆ ಆಂಧ್ರದಲ್ಲಿ ಅವಮಾನ!

ಪೂರ್ಣ ವಿ-ರಾಮ
ಅಲ್ಲು ಅರ್ಜುನ್ ನಟಿಸಿರೋ ಪುಷ್ಪ ಚಿತ್ರದ ಮುಂದೆ ಕನ್ನಡದ ಕೆಜಿಎಫ್ ಯಾವ ಲೆಕ್ಕ? ಕೆಜಿಎಫ್ ಹತ್ತು ಚಿತ್ರಗಳು ಈಸ್ ಇಕ್ವಲ್ಸ್ ಟು ಒಂದು ಪುಷ್ಪ ಚಿತ್ರ ಎನ್ನುವ ಸ್ಟೇಟ್ ಮೆಂಟ್ ಒಂದನ್ನ ತೆಲುಗಿನ ಜನಪ್ರಿಯ ನಿರ್ದೇಶಕ ಬುಚ್ಚಿಬಾಬು ಸನ ಕೊಟ್ಟುಬಿಟ್ಟಿದ್ದಾನೆ. ತನ್ನ ಸಿನೆಮಾ ಗುರು ಸುಕುಮಾರ್ ಎಂಬಾತನಿಗೆ ಬಕೆಟ್ ಹಿಡಿಯುವ ಬರದಲ್ಲಿ ಕನ್ನಡದ ಹೆಮ್ಮೆಯ ನ್ಯಾಷನಲ್ ಸಿನೆಮಾಗೆ ಅವಮಾನಿಸಿ ಮಾತನಾಡಿಬಿಟ್ಟಿದ್ದಾನೆ!
ಸುಕುಮಾರ್ ಅಂದ್ರೆ ಪುಷ್ಪ ಚಿತ್ರದ ನಿರ್ದೇಶಕ!
ಈಗೇನು ತೆಲುಗು ನಾಡಲ್ಲಿ ಒಂದು ಹಂತದ ಸುದ್ದಿ ಮಾಡುತ್ತಿದೆ, ಅದೇ ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್. ಈ ಸುಕುಮಾರ್ ಜೊತೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದವರು ಬುಚ್ಚಿಬಾಬು ಸನ. ಈ ಸನ ನಿರ್ದೇಶನದ ಉಪ್ಪೆನ ಎಂಬ ಚಿತ್ರ ಇತ್ತೀಚೆಗೆ ಸೂಪರ್ ಹಿಟ್ ಆಗಿದೆ. ಅದೇ ಸನ ಇದೀಗ ತನ್ನ ಗುರುವಿನ ಪುಷ್ಪ ಚಿತ್ರವನ್ನ ಹೊಗಳುವ ಅರ್ಜೆಂಟಲ್ಲಿ ಕನ್ನಡ ಚಿತ್ರವನ್ನ ತುಚ್ಛವಾಗಿ ಕಂಡುಬಿಟ್ಟಿದ್ದಾನೆ. ಪುಷ್ಪ ಚಿತ್ರವೂ ಒಂದೇ ಹತ್ತು ಕೆಜಿಎಫ್ ಚಿತ್ರವೂ ಒಂದೇ ಎಂಬ ಅರ್ಥದಲ್ಲಿ ನಾಲಿಗೆ ಹರಿಬಿಟ್ಟಿದ್ದಾನೆ!
ಯಶ್ ಅಭಿಮಾನಿಗಳಿಂದ ಮಂಗಳಾರತಿ!
ಅದೇ ಉಪ್ಪೆನಾ ಚಿತ್ರದ ನಿರ್ದೇಶಕನಿಗೆ ಈಗ ಕರ್ನಾಟಕದಾದ್ಯಂತ ಯಶ್ ಅಭಿಮಾನಿಗಳು ಉಗಿದು ಉಪ್ಪಿನಕಾಯಿ ಹಾಕುತ್ತಿದ್ದಾರೆ. ಏನ್ ತಿಳ್ಕೊಂಡಿದಾನೆ ಅವನು ಬುಚ್ಚಿ ಬಾಬು? ನಮ್ಮ ಹೀರೋ ಸಿನೆಮಾ ಬಗ್ಗೆ ಕಾಮೆಂಟ್ ಮಾಡ್ತಾನಾ? ಎಂದು ಕೆಂಡಾಮಂಡಲಗೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದಿಕ್ಕಾರ ಕೂಗುವುದರ ಜೊತೆಗೆ ಯಶ್ ಬಗ್ಗೆ ಇನ್ನೊಮ್ಮೆ ಮಾತನಾಡಿದರೆ ಹುಷಾರ್ ಎಂದು ಬೈದಾಡಿ ಕೂಗಾಡಿದ್ದಾರೆ!
ಕೆಜಿಎಫ್ ನಿಜಕ್ಕೂ ಕನ್ನಡದ ಹೆಮ್ಮೆ!
ಕನ್ನಡ ಚಿತ್ರವೊಂದು ನ್ಯಾಷನಲ್ ಲೆವೆಲ್ ನಲ್ಲಿ ಸೌಂಡು ಮಾಡಿದೆ ಎಂದರೆ ಅದರಲ್ಲಿ ಏನೋ ಒಂದು ಶಕ್ತಿ ಅಥವಾ ಕಂಟೆಂಟ್ ಇರಲೇಬೇಕು. ಅಂಥದ್ದರಲ್ಲಿ ತೆಲುಗಿನ ಇದೀಗ ತಾನೇ ಕಣ್ಣು ಬಿಟ್ಟು, ಅಂಬೇಗಾಲಿಟ್ಟು ಓಡಾಡುತ್ತಿರೋ ವ್ಯಕ್ತಿಯೊಬ್ಬ ತನ್ನ ಗುರುವಿಗೆ ಬಕೆಟ್ ಹಿಡಿಯುವ ಉದ್ದೇಶದಿಂದ ಇಡೀ ದೇಶವೇ ಮೆಚ್ಚಿರೋ ಕನ್ನಡದ ಮೈಲ್ ಸ್ಟೋನ್ ಚಿತ್ರಕ್ಕೆ ಉಪ್ಪೆನಾ ಚಿತ್ರದ ನಿರ್ದೇಶಕ ರೀತಿ ಮಾತನಾಡಿ ಕ್ರೆಡಿಬಲಿಟಿ ಕಮ್ಮಿ ಮಾಡಿರುವುದು ನಿಜಕ್ಕೂ ಒಪ್ಪಲಾರದ ವಿಷಯ!