ಸಿನಿಮಾಸೆಲೆಬ್ರಿಟಿ

ಕಿರಾತಕ(1-2) ಕಹಾನಿ!

ಪೂರ್ಣ ವಿ-ರಾಮ

ನ್ಯಾಷನಲ್ ನಟ ಯಶ್ ಕರಿಯರ್ ಗೆ ದೊಡ್ಡ ಟರ್ನಿಂಗ್ ಪಾಯಿಂಟ್ ಅಂದರೆ ಅದು ಕಿರಾತಕ ಚಿತ್ರ. ಚಿತ್ರ ರೀಮೇಕೇ ಆಗಿದ್ದರೂ ಅದನ್ನು ನಿರ್ದೇಶಕ ಪ್ರದೀಪ್ ರಾಜ್ ನೀಟಾಗಿ ಕನ್ನಡೀಕರಿಸಿದ್ದರು. ಮಂಡ್ಯ ಶೈಲಿಯ ಬಾರ್ಲಾ ಹೋಗ್ಲಾ ಲಾಂಗ್ವೇಜ್ ಬಳಸಿ, ಆ ಚಿತ್ರವನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದರು.

ಅದೇ ಕಿರಾತಕನಿಗೆ ಹತ್ತು ವರ್ಷ!
ಯಶ್ ಸಿನೆಮಾ ಜರ್ನಿಯಲ್ಲಿ ಕೆಜಿಎಫ್ ಹೇಗೋ ಹಾಗೆಯೇ ಆ ದಿನಗಳಲ್ಲಿ ಕಿರಾತಕ‌. ಮೈಸೂರು ಮಂಡ್ಯ ಭಾಗದಲ್ಲಿ ಶತದಿನೋತ್ಸವ ಕಂಡ ಚಿತ್ರ. ಈಗೇನು ಕೆಜಿಎಫ್ ಚಿತ್ರ ನ್ಯಾಷನಲ್ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ, ಅದು ಬಿಡುಗಡೆ ಆಗುವುದಕ್ಕಿಂತ ಮುಂಚೆ ಯಶ್ ಕಿರಾತಕ 2 ಚಿತ್ರ ಅನೌನ್ಸ್ ಮಾಡಿ ಹತ್ತು ದಿನ ಶೂಟ್ ಕೂಡ ಮಾಡಿದ್ದರು. ರ್ಯಾಂಬೋ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಅದರ ಸಾರಥ್ಯ ವಹಿಸಿದ್ದರು.

ಕೆಜಿಎಫ್ ಬಂದ್ಮೇಲೆ ಕಿರಾತಕ೨ ಕಿಲ್ಲಾದ!?
ಯಾವಾಗ ಈ ಕಡೆ ಕೆಜಿಎಫ್ ಚಿತ್ರ ದೇಶಾದ್ಯಂತ ಸದ್ದು ಮಾಡಿತೋ ಯಶ್ ತಲೆಯಲ್ಲಿ ಬೇರೆ ಕ್ಯಾಲ್ಕುಲೇಷನ್ ಓಡತೊಡಗಿತು. ಅದೇ ಲೆಕ್ಕಾಚಾರದ ಮೇಲೆ ಕಿರಾತಕ ೨ ಚಿತ್ರವನ್ನ ಯಶ್ ಅವರೇ ನಿಲ್ಲಿಸಲು ಹೇಳಿಬಿಟ್ಟರು. ಕೆಜಿಎಫ್ ೨ ಸಿನೆಮಾದ ನಿರೀಕ್ಷೆಯಲ್ಲಿರುವ ಅಭಿಮಾನಿಗಳಿಗೆ ಕಿರಾತಕ‌ ೨ ಅಷ್ಟು ಮಜಾ ಕೊಡುವುದು ಡೌಟು ಎಂಬ ನಿರ್ಧಾರದ ಆಧಾರದ ಮೇಲೆ ಕಿರಾತಕನನ್ನ ಅಲ್ಲೇ ನಿಲ್ಲುವಂತೆ ಮಾಡಿದರು ಯಶ್.

ಅದೇನೇ ಇದ್ದರೂ ಹತ್ತು ವರುಷದ ಹಿಂದೆ ಬಿಡುಗಡೆಯಾದ ಕಿರಾತಕ ಚಿತ್ರದಿಂದ ಯಶ್ next level ನಟ ಎಂದು ಗುರುತಿಸಿಕೊಂಡರು ಎನ್ನುವುದಂತೂ ಸತ್ಯ.

Spread the love

Related Articles

Leave a Reply

Your email address will not be published. Required fields are marked *

Back to top button