ರಜನಿಕಾಂತ್ ಕುಶಲವೇ ಕ್ಷೇಮವೇ?

ಪೂರ್ಣ ವಿ-ರಾಮ
ಆರೋಗ್ಯ ತಪಾಸಣೆಗೆ ಅಮೆರಿಕಾಗೆ ತೆರಳಿರುವ ರಜನಿಕಾಂತ್ ಕ್ಷೇಮವಾಗಿದ್ದಾರೆ ಎಂದು ಅವರ ಆತ್ಮೀಯ ಹಾಗೂ ಗೀತ ರಚನೆಕಾರ ವೈರಮುತ್ತು ಟ್ವೀಟ್ ಮಾಡಿದ್ದಾರೆ.
ಇದೇ ಜೂನ್ ೧೯ಕ್ಕೆ ಮಾಮೂಲಿ ಆರೋಗ್ಯ ತಪಾಸಣೆ ಮಾಡಿಸಲು ಅಮೆರಿಕಾಗೆ ತೆರಳಿದ್ದ ರಜನಿ, ತಮ್ಮ ಗೆಳೆಯ ವೈರಮುತ್ತುರನ್ನು ಫ್ಲೈಡ್ ಮೂಲಕ ಕರೆಸಿಕೊಂಡಿದ್ದಾರೆ.
ತಲೈವಾ ಫ್ಯಾನ್ಸ್ ಗಾಗಿತ್ತು ತಲೆಬಿಸಿ!
ವಯಸ್ಸಿನ ಕಾರಣಕ್ಕೆ, ಕೋವಿಡ್ ಅಲೆಗಳ ಕಾರಣಕ್ಕೆ, ಆಗಾಗ ಆರೋಗ್ಯ ಕೈ ಕೊಟ್ಟಿರೋ ಕಾರಣಕ್ಕೆ ತಲೈವಾ ರಜನಿ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದು. ಐದು ವರುಷದ ಹಿಂದೆ ರಜನಿಯ ಕಿಡ್ನಿಗೆ ಕಸಿ ಮಾಡಿಸಲಾಗಿತ್ತು. ಪಡೆಯಪ್ಪ ವ್ಯಾಕ್ಸಿನ್ ಪಡೆದಿದ್ದರೂ ಕೋವಿಡ್ ಕಾಲದಲ್ಲಿ ಅವರ್ಯಾಕೆ ವಿದೇಶಿ ಪ್ರಯಾಣ ಬೆಳೆಸಿದರು ಎಂಬ ಅನುಮಾನ ಅವರ ವರ್ಲ್ಡ್ ವೈಡ್ ಅಭಿಮಾನಿಗಳಿಗೆ ಇತ್ತು. ಲತಾ ರಜನಿಕಾಂತ್ ಇದು ಬರೀ ಜನರಲ್ ಚಕಪ್ ಎಂದು ಹೇಳಿಕೆ ಕೊಟ್ಟು ಫ್ಲೈಟ್ ಹತ್ತಿದ್ದರೂ ಅನುಮಾನದ ಹುತ್ತ ಬೆಳೆದಿತ್ತು. ಅದ್ಯಾವಾಗ ತಲೈವಾ ಆತ್ಮೀಯ ಸ್ನೇಹಿತ ಟ್ವಿಟ್ ಮೂಲಕ ರಜನಿ ಈಸ್ ಆಲ್ ರೈಟ್ ಎಂದರೋ ಎಲ್ಲರಿಗೂ ಹತ್ತು ಲೋಟ ಹಾಲು ಕುಡಿದಷ್ಟೇ ಸಮಾಧಾನವಾಗಿದೆ. ರಜನಿಕಾಂತ್ ಆರೋಗ್ಯದ ಅಲೆಯಲ್ಲಿ ಏರು ಪೇರಾಗಿದೆ ಎಂಬ ಅನುಮಾನಕ್ಕೆ ತೆರೆ ಬಿದ್ದಿದೆ. ಕಬಾಲಿ ಖಾಸಾ ದೋಸ್ತ್ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿರುವುದರಿಂದ ಅಣ್ಣಾಮಲೈ ಅಭಿಮಾನಿಗಳ ಮೊಗದಲ್ಲಿ ನಗುವಿನ ಅಲೆ ಎದ್ದಿದೆ!