ಸಂಗೀತ/ನೃತ್ಯಸಿನಿಮಾಸೆಲೆಬ್ರಿಟಿ

ರಕ್ಷಿತ್ ಶೆಟ್ಟಿ ರಿಲೀಫ್ ಆದ್ರು ಮಾರಾಯ್ರೆ…!

ಪೂರ್ಣ ವಿ-ರಾಮ

ಹೌದು, ಕಿರಿಕ್ ಪಾರ್ಟಿ ಚಿತ್ರದಲ್ಲಿನ ಹಾಡೊಂದರ ಟ್ಯೂನ್ ನಮ್ಮ ಸಂಸ್ಥೆಯ ಪ್ರಾಪರ್ಟಿ. ಅದನ್ನ ಕದ್ದಿದ್ದಾರೆ ಎಂದು ರಕ್ಷಿತ್ & ಪಾರ್ಟಿಗಳ ವಿರುದ್ಧ ಲಹರಿ ಆಡಿಯೋ ಸಂಸ್ಥೆ ಕೇಸ್ ಜಡಿದಿತ್ತು. ಆ ಜಟಾಪಟಿಗೆ ಇದೀಗ ತೆರೆ ಬಿದ್ದಿದ್ದು, ವೇಲು ಅವರನ್ನು ರಕ್ಷಿತ್ ತಂಡ ಭೇಟಿಯಾಗಿ ಕಾಂಪ್ರಮೈಸ್ ಮಾಡಿಕೊಂಡಿದೆ.

ಹೋಟೆಲ್ ಮೇ ಮೀಟಿಂಗ್ ಪಾರ್ಟಿ!
ಲಹರಿ ಸಂಸ್ಥೆಯ ಒನ್ ಆಫ್ ದಿ ಓನರ್ ಲಹರಿ ವೇಲು, ಕಿರಿಕ್ ಪಾರ್ಟಿ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ರಕ್ಷಿತ್ ಶೆಟ್ಟಿ ಒಟ್ಟಿಗೆ ನಿಂತು ಸೆಲ್ಫಿ ಒಂದನ್ನು ತೆಗೆದು ಪೋಸ್ಟ್ ಮಾಡಿದ್ದಾರೆ. ಈ ವಿಷಯಕ್ಕೆ ಕೋರ್ಟ್ ಮೆಟ್ಟಿಲೇರಿದ್ದ ವೇಲು ಅವರು ಈ ಕೇಸ್ ವಾಪಸ್ ಪಡೆದಿದ್ದಕ್ಕೆ ಧನ್ಯವಾದ ಎಂದಿದ್ದಾರೆ ರಕ್ಷಿತ್ ಶೆಟ್ರು.

ಹೇ ಹೂ ಆರ್ ಯೂ?!?
ಕಿರಿಕ್ ಪಾರ್ಟಿ ಚಿತ್ರದಲ್ಲಿ ಹೀಗೊಂದು ಹಾಡಿದೆ. ಹಾಸ್ಟೆಲ್ ಹುಡುಗ ಹುಡುಗಿಯರು ಸೇರಿ ಪಾರ್ಟಿ ಮಾಡಿ ಕುಷಿಯುವ ಸಾಂಗ್. ಆ ಹಾಡಲ್ಲಿ ಮಧ್ಯರಾತ್ರೀಲಿ ಎಂಬ ಶಾಂತಿ ಕ್ರಾಂತಿ ಚಿತ್ರದ ಆಡಿಯೋ ತುಣುಕು ಬಳಸಲಾಗಿತ್ತು. ಅದು ನಮ್ಮ ಸ್ವತ್ತು ಎಂದು ವೇಲು ತಂಡ ಕೇಸ್ ಹಾಕಿತ್ತು. ಅದೇ ಮ್ಯಾಟರ್ ಈಗ ಸುಖಾಂತ್ಯ ಕಂಡಿದೆ. ರಕ್ಷಿತ್ ಶೆಟ್ರ ಮುಖದಲ್ಲಿ ಮುಕ್ಕಾಲು ಕೇಜಿ ಮಂದಹಾಸ ಮೂಡಿದೆ ಮಾರ್ರೇ…!

Spread the love

Related Articles

Leave a Reply

Your email address will not be published. Required fields are marked *

Back to top button