ಗುಟ್ಟಾಗಿ ಕಲಾಸಾಮ್ರಾಟ್ ಕಲಾಸೇವೆ!

ಪೂರ್ಣ ವಿ-ರಾಮ
ಕೋವಿಡ್ ಕಡು ಸಂಕಷ್ಟಕ್ಕೆ ಸಿಲುಕಿ ಸಾಕಷ್ಟು ಕಲಾವಿದರು ತಂತ್ರಜ್ಞರು ತತ್ತರಿಸಿ ಹೋಗಿದ್ದಾರೆ! ಅದರಲ್ಲೂ ಕಾರ್ಮಿಕ ವರ್ಗದ ಕಷ್ಟ ಕೇಳುವವರೇ ಇಲ್ಲ. ಇಂಥ ಪರಿಸ್ಥಿತಿಯಲ್ಲಿ ಸೆಟಲ್ಡ್ ಕಲಾವಿದರು, ಒಂದು ಹಂತದಲ್ಲಿ ಚೆನ್ನಾಗಿರುವ ವ್ಯಕ್ತಿಗಳು ಒಂದಷ್ಟು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಇನ್ನು ಕೆಲವರು ತಮ್ಮ ಕೈಲಾಸ ಸಪೋರ್ಟ್ ಮಾಡುತ್ತಿದ್ದಾರೆ. ಹಾಗೆ ಗುಟ್ಟಾಗಿ ಸಹಾಯ ಮಾಡುತ್ತಿರುವವರ ಪೈಕಿ ಹಿರಿಯ ನಿರ್ದೇಶಕ ಎಸ್ ನಾರಾಯಣ್ ಕೂಡ ಒಬ್ಬರು. ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಂತೂ ಅವರೇ ಖುದ್ದು ಅಕ್ಕಿ ಬೇಳೆ-ಗೋದಿ-ರಾಗಿ ಕಿಟ್ ಗಳನ್ನ ತುಂಬಿತುಂಬಿ ಕೊಟ್ಟಿದ್ದಾರೆ. ಇದನ್ನ ನಾವು ಹೇಳುತ್ತಿರುವುದಲ್ಲ. ನೂರಾರು ನೃತ್ಯ ಕಲಾವಿದರು, ಸಾಹಸ ಕಲಾವಿದರು ಹೇಳುತ್ತಿರುವುದು!
ಐವತ್ತೆಂಟರಲ್ಲೂ ಬಡವರ ಸಂಕಷ್ಟಕ್ಕೆ ನಾಣಿ!
ಕೋವಿಡ್ ಎರಡನೇ ಅಲೆಯ ತೀವ್ರಸ್ವರೂಪದ ಹೊಡೆತಕ್ಕೆ ಸಿಲುಕಿದವರು ಅದೆಷ್ಟೋ. ಸಾಕಷ್ಟು ಮಂದಿ ಮನೆಯಿಂದ ಆಚೆಯೇ ಬಂದಿಲ್ಲ. ಅಂಥದ್ದರಲ್ಲಿ ನಾರಾಯಣ್ ತಾವೇ ಖುದ್ದಾಗಿ ಓಡಾಡಿ, ನೂರಾರು ಬಡ ಕಾರ್ಮಿಕರ ಮನೆಗೆ ಕಿಟ್ ಸಪ್ಲೇ ಮಾಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಮಿಕರಿಗೆ ಆಸರೆಯಾಗಿದ್ದಾರೆ ಕಲಾಸಾಮ್ರಾಟ್ ಎಸ್ ನಾರಾಯಣ್.
ಅಂದಹಾಗೆ ನಾರಾಯಣ್ ಸದ್ಯ ಡಿ5 ಹೆಸರಿನ ಚಿತ್ರದ ಕೆಲಸದ ಜೊತೆಗೆ ಇನ್ನೊಂದು ಹೊಸ ಚಿತ್ರ ಕೈಗೆತ್ತಿಕೊಂಡಿದ್ದಾರೆ.