ಸುರೇಶ್ ರೈನಾ ಬಯೋಪಿಕ್ಗೆ ಹೀರೋ ಯಾರು?

ಪೂರ್ಣ ವಿ-ರಾಮ
ಕ್ರಿಕೆಟ್ ಲೋಕದ ಜನಪ್ರಿಯ ತಾರೆ ಸುರೇಶ್ ರೈನಾ ಜೀವನ ಆಧಾರಿತ ಸಿನೆಮಾ ಆಗುತ್ತಿದೆ. ಬಾಲಿವುಡ್ ಭಾಷೆಯಲ್ಲಿ ಈ ಸಿನೆಮಾ ಬಗ್ಗೆ ಒಂದು ಹಂತದ ಮೂತುಕತೆ ಆಗಿದ್ದು ಅತೀ ಶೀಘ್ರದಲ್ಲೇ ಅದು ಶುರುವಾಗಲಿದೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರೋ ಸುರೇಶ್ ರೈನಾ, ತಮ್ಮ ಪಾತ್ರವನ್ನು ಈ ಇಬ್ಬರಲ್ಲಿ ಯಾರು ಮಾಡಿದರೂ ತನಗೆ ತುಂಬಾ ಖುಷಿ ಎಂದಿದ್ದಾರೆ!
ದುಲ್ಕರ್ ಸಲ್ಮಾನ್ ಅಥವಾ ಸೂರ್ಯಾ!?
ಕ್ರಿಕೆಟ್ ಪ್ರಿಯರೂ, ಸುರೇಶ್ ರೈನಾ ಆತ್ಮೀಯರೂ ಆಗಿರೋ ತಮಿಳಿನ ಸಿಂಗಂ ಖ್ಯಾತಿಯ ಸೂರ್ಯ ಅವರು ಮಾಡಿದರೆ ಚೆನ್ನಾಗಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ ರೈನಾ.
ಸೂರ್ಯ ಅವರನ್ನು ಬಿಟ್ಟರೆ ಮಲಯಾಳಂನ ಖ್ಯಾತ ನಟ ದುಲ್ಕರ್ ಸಲ್ಮಾನ್ ನಟಿಸಿದರೂ ತುಂಬಾ ಸಂತೋಷ ಎಂದಿದ್ದಾರೆ ಸುರೇಶ್. ಖ್ಯಾತ ನಟ ಮಮ್ಮುಟಿ ಮಗ ದುಲ್ಕರ್ ಕೇರಳ ನಾಡಲ್ಲಿ ಹೇರಳ ಹೆಸರು ಮಾಡಿದ್ದು, ಅವರು ನಟಿಸಿದರೂ ತಮ್ಮ ಪಾತ್ರಕ್ಕೆ ಜೀವ ತುಂಬುತ್ತಾರೆ ಎಂದು ದುಲ್ಕರ್ ಮತ್ತು ಸೂರ್ಯ ಅವರನ್ನು ಮನಸಾರೆ ಹೊಗಳಿದ್ದಾರೆ ರೈನಾ.
ಹಿಂದಿಯಲ್ಲಿ ಈಚಿನ ವರ್ಷಗಳಲ್ಲಿ ಸಚಿನ್ ಹಾಗೂ ಧೋನಿ ಅವರ ಬಯೋಪಿಕ್ ಸಿನೆಮಾ ಆಗಿದ್ದು, ಇದೀಗ ಸುರೇಶ್ ರೈನಾ ಕಥನಕ್ಕೆ ಸಿನೆಮಾ ರೂಪ ಸಿಗಲಿದೆ.
ಅಂದಹಾಗೆ ಸೂರ್ಯ ಹಾಗೂ ಸುರೇಶ್ ಪರಸ್ಪರ ಹತ್ತಿರದ ಸ್ನೇಹಿತರಾಗಿದ್ದು, ಸೂರ್ಯ ತಮ್ಮ ಪಾತ್ರ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ ಅಂತಾರೆ ರೈನಾ!