ಮನರಂಜನೆಸಿನಿಮಾ

ಶಾರುಖ್ ಮಾಲೀಕತ್ವದ ಪ್ರೊಡಕ್ಷನ್​ ಹೌಸ್​ನಿಂದ ಹೊರಬಂದ ಕಾರ್ತಿಕ್​ ಆರ್ಯನ್​

ಇತ್ತೀಚೆಗಷ್ಟೆ ಕರಣ್​ ಜೋಹರ್​ ಅವರ ಧರ್ಮಾ ಪ್ರೊಡಕ್ಷನ್​ನಿಂದ ಹೊರಬಂದು ಸುದ್ದಿಯಾಗಿದ್ದ ಬಾಲಿವುಡ್​ನ ಉದಯೋನ್ಮುಖ ನಟ ಕಾರ್ತಿಕ್​ ಆರ್ಯನ್​ ಇದೀಗ ಶಾರುಖ್​ ಖಾನ್ ಅವರ ರೆಡ್​ ಚಿಲ್ಲೀಸ್​ ಎಂಟರ್​ಟೈನ್ಮೆಂಟ್​ನಿಂದಲೂ ಹೊರ ನಡೆದಿದ್ದಾರೆಂದು ವರದಿಯಾಗಿದೆ.

ತಮ್ಮ ಶ್ರಮದಿಂದಲೇ ಬಾಲಿವುಡ್​ನಲ್ಲಿ ತಮ್ಮದೇ ಸ್ಥಾನ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿರುವ ನಟ ಕಾರ್ತಿಕ್ ಆರ್ಯನ್​, ಉದ್ದುದ್ದ ಡೈಲಾಗ್​ ಹೇಳುವ ಕಾರಣದಿಂದ ಹೆಚ್ಚು ಗಮನ ಸೆಳೆದಿದ್ದವರು.

ಬಾಲಿವುಡ್​ನಲ್ಲಿ ಬೇಡಿಕೆಯಲ್ಲಿದ್ದು ಸಾಲು ಸಾಲು ಸಿನಿಮಾಗಳಿಗೆ ಸಹಿ ಮಾಡಿದ್ದಾರೆ ಈ ಯುವನಟ. ಇಂತಹ ನಟ ಈಗ ಒಂದರ ಹಿಂದೆ ಒಂದರಂತೆ ದೊಡ್ಡ ಬ್ಯಾನರ್​ಗಳ ಚಿತ್ರಗಳಿಂದ ಹೊರಬರುತ್ತಿದ್ದಾರೆ.

ಇತ್ತೀಚೆಗಷ್ಟೆ ಕರಣ್​ ಜೋಹರ್​ ಅವರ ಧರ್ಮಾ ಪ್ರೊಡಕ್ಷನ್ಸ್​ ಅಡಿ ನಿರ್ಮಾಣವಾಗುತ್ತಿದ್ದ ಸಿನಿಮಾದಿಂದ ಹೊರ ಬಂದಿದ್ದ ಕಾರ್ತಿಕ್​, ಆ ಪ್ರಾಜೆಕ್ಟ್​ಗಾಗಿ ಪಡೆದಿದ್ದ ಹಣವನ್ನು ಹಿಂತಿರುಗಿಸುವ ಮೂಲಕ ಚರ್ಚೆಯಲ್ಲಿದ್ದರು. ಈಗ
ಶಾರುಖ್​ ಖಾನ್​ ಮಾಲೀಕತ್ವದ ರೆಡ್​ ಚಿಲ್ಲೀಸ್​ ಎಂಟರ್​ಟೈನ್ಮೆಂಟ್​ನ ಸಿನಿಮಾದಿಂದಲೂ ಹೊರ ನಡೆದಿದ್ದಾರೆಂದು ಸುದ್ದಿಯಾಗಿದೆ.

ಶಾರುಖ್​ ಅವರ ಹೋಂ ಪ್ರೊಡಕ್ಷನ್​ನಲ್ಲಿ ಫ್ರೆಡಿ ಎಂಬ ಸಿನಿಮಾ ನಿರ್ಮಾಣವಾಗುತ್ತಿದ್ದು, ಅದಕ್ಕಾಗಿ ಕಾರ್ತಿಕ್​ ಆರ್ಯನ್​ಗೆ ನಾಯಕನಾಗಿ ನಟಿಸಲು ದೊಡ್ಡ ಮೊತ್ತವನ್ನೇ ಕೊಡಲಾಗಿತ್ತಂತೆ. ಆದರೆ ಈ ಸಿನಿಮಾ ಕುರಿತಾಗಿ ಇನ್ನೂ ಯಾವ ಅಧಿಕೃತ ಪ್ರಕಟಣೆ ಹೊರಬಿದ್ದಿರಲಿಲ್ಲ. ಈಗ ಕಾರ್ತಿಕ ಪಡೆದಿದ್ದ ಹಣವನ್ನು ಹಿಂತಿರುಗಿಸಿದ್ದಾರೆ ಎಂದು ಸುದ್ದಿ.

Spread the love

Related Articles

Leave a Reply

Your email address will not be published. Required fields are marked *

Back to top button