ಬಾಲಿವುಡ್ಮನರಂಜನೆಸಿನಿಮಾ

11ನೇ ವಯಸ್ಸಿನಲ್ಲಾದ ದೌರ್ಜನ್ಯದ ಬಗ್ಗೆ ಮಾತನಾಡಿದ ಕಂಗನಾ

ಬಿಟೌನ್ ನಟಿ ಕಂಗನಾ ರಣಾವತ್ ನಡೆಸಿಕೊಡುವ ಲಾಕ್ ಅಪ್ ರಿಯಾಲಿಟಿ ಶೋ ನಾನಾ ಮುಖಗಳನ್ನು ತೆರೆದಿಡುತ್ತಿದೆ. ಈಗಾಗ್ಲೆ ಸಾಕಷ್ಟು ಮಂದಿ ಈ ಶೋ ಮೂಲಕ ತಮಗಾದ ಅನ್ಯಾಯ ಹಾಗೂ ತಮ್ಮ ಜೀವನದ ಕಹಿ ಘಟನೆಗಳನ್ನ ಬಿಚ್ಚಿಡುತ್ತಿದ್ದಾರೆ. ಇದೀಗ ಸ್ವತಃ ನಟಿ ಕಂಗನಾ ರಣಾವತ್ ತಮ್ಮ ಮೇಲಾದ ದೌರ್ಜನ್ಯದ ಕುರಿತು ಮಾತನಾಡಿದ್ದಾರೆ.

ತಮ್ಮ ಮೇಲೆ 11ನೇ ವಯಸ್ಸಿನಲ್ಲಿ ಆದ ದೌರ್ಜನ್ಯದ ಬಗ್ಗೆ ಮಾತನಾಡಿರುವ ಕಂಗನಾ ರಣಾವತ್ ಇಂತಹ ಅನುಭವಗಳನ್ನು ಬಹಿರಂಗವಾಗಿ ಹೇಳಿಕೊಳ್ಳದೇ ಇದ್ದರೆ, ದೌರ್ಜನ್ಯ ನಡೆಯುತ್ತಲೇ ಇರುತ್ತದೆ ಎಂದಿದ್ದಾರೆ.

ಕಂಗನಾ ಅವರಿಗೆ 11ರ ವಯಸ್ಸಿದ್ದಾಗ ಅವರಿಗಿಂತ ಮೂರ್ನಾಲ್ಕು ವರ್ಷ ಜಾಸ್ತಿ ವಯಸ್ಸಾಗಿದ್ದ ಹುಡುಗ ಕಂಗಾನ ಅವರ ಬಟ್ಟೆಬಿಚ್ಚಿಸುತ್ತಿದ್ದನಂತೆ. ಅವನು ಹಾಗೆ ಮಾಡುತ್ತಿದ್ದಾನೆ ಎಂದು ಆಗ ಅರಿಯದ ವಯಸ್ಸು. ಅವನಿಗೆ ಲೈಂಗಿಕ ಸಮಸ್ಯೆ ಇರಬೇಕು ಎಂದು ಆಮೇಲೆ ಅವರಿಗೆ ಗೊತ್ತಾಯಿತು ಎಂದು ಕಂಗನಾ ಹೇಳಿಕೊಂಡಿದ್ದಾರೆ.

Spread the love

Related Articles

Leave a Reply

Your email address will not be published.

Back to top button