ಬಾಲಿವುಡ್ಮನರಂಜನೆಸಿನಿಮಾ

ಆಪ್ತರ ಸಮ್ಮುಖದಲ್ಲಿ ನೆರವೇರಿತು ಆಲಿಯಾ ಭಟ್-ರಣಬೀರ್ ಕಪೂರ್ ಮದುವೆ

ಕಳೆದ ಕೆಲವು ವರ್ಷಗಳಿಂದ ಪ್ರೀತಿಯಲ್ಲಿದ್ದ ಬಾಲಿವುಡ್ ಕ್ಯೂಟ್ ಕಪಲ್ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಹಸೆ ಮಣೆ ಏರಿದ್ದಾರೆ. ವಿವಾಹದ ಕುರಿತಾಗಿ ಸಾಕಷ್ಟು ಸೀಕ್ರೇಟ್ ಮೆಂಟೇನ್ ಮಾಡಿದ್ದ ಜೋಡಿ ಹಕ್ಕಿಗಳು ಇನ್ ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡುವ ಮೂಲಕ ಮದುವೆಯ ವಿಷಯ ತಿಳಿಸಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ನವ ಜೋಡಿಗಳಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಜೋಡಿಯಾಗಿ ಬ್ರಹ್ಮಾಸ್ತ್ರ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಸೆಟ್ಟೇರಿ ಸಾಕಷ್ಟು ವರ್ಷಗಳೇ ಕಳೆದಿದೆ. ಈ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿಯೇ ಇಬ್ಬರಿಗೂ ಪ್ರೀತಿ ಮೂಡಿತ್ತು ಅನ್ನೋ ಮಾತು ಕೇಳಿ ಬಂದಿತ್ತು. ಅಂದ್ಹಾಗೆ ಆಲಿಯಾಗೆ ಚಿಕ್ಕ ವಯಸ್ಸಿನಲ್ಲೇ ರಣಬೀರ್ ಕಪೂರ್ ಮೇಲೆ ಕ್ರಶ್ ಆಗಿತ್ತು. ಈ ವಿಷಯವನ್ನ ಸಾಕಷ್ಟು ಭಾರಿ ಆಲಿಯಾ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಹೀಗಿರುವಾಗಲೇ ಇಬ್ಬರೂ ಜೊತೆಯಾಗಿ ನಟಿಸುವ ಅವಕಾಶ ಸಿಕ್ಕಿತ್ತು. ಈ ವೇಳೆಯೇ ಇಬ್ಬರಿಗೂ ಪ್ರೀತಿ ಆರಂಭವಾಗಿತ್ತು.

ರಣಬೀರ್ ಹಾಗೂ ಆಲಿಯಾ ಮದುವೆ ಮುಂಬೈನಲ್ಲಿರುವ ರಣಬೀರ್ ಅವರ ನಿವಾಸದಲ್ಲಿ ನಡೆದಿದೆ. ಕೇವಲ ಆಪ್ತರು ಮಾತ್ರವೇ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ನೀತು ಕಪೂರ್, ಕರೀನಾ ಕಪೂರ್, ಕರಿಶ್ಮಾ ಕಪೂರ್, ಆಲಿಯಾ ಮೆಂಟರ್, ನಿರ್ಮಾಪಕ ಕರಣ್ ಜೋಹರ್ ಸೇರಿ ಕೆಲವೇ ಕೆಲವು ಮಂದಿ ಮದುವೆಗೆ ಸಾಕ್ಷಿ ಆದರು.
ವಿವಾಹದ ಫೋಟೋಗಳನ್ನ ಶೇರ್ ಮಾಡಿರುವ ಆಲಿಯಾ, ಮುದ್ದಾದ ಕ್ಯಾಪ್ಷನ್ ಕೂಡ ನೀಡಿದ್ದಾರೆ. ಕುಟುಂಬದವರು, ಗೆಳೆಯರ ಸಮ್ಮುಖದಲ್ಲಿ, ನಮ್ಮದೇ ಮನೆಯಲ್ಲಿ, ನಮ್ಮ ನೆಚ್ಚಿನ ಸ್ಥಳದಲ್ಲಿ, ನಮ್ಮ ಸಂಬಂಧವನ್ನು ಐದು ವರ್ಷ ಕಳೆದ ಬಾಲ್ಕನಿಯಲ್ಲಿ ನಾವು ಮದುವೆ ಆದೆವು ಎಂದು ಬರೆದುಕೊಂಡಿದ್ದಾರೆ.

Spread the love

Related Articles

Leave a Reply

Your email address will not be published.

Back to top button