ಬಾಲಿವುಡ್ಮನರಂಜನೆಸಿನಿಮಾಸ್ಯಾಂಡಲ್ ವುಡ್

ಗಂಡನಿಗೆ ಧನ್ಯವಾದ ಹೇಳಿದ ನಟಿ ಕಾಜಲ್

ಮದುವೆಯ ಬಳಿಕ ಸಿನಿಮಾ ರಂಗದಿಂದ ದೂರ ಉಳಿದಿರೋ ನಟಿ ಕಾಜಲ್ ಅಗರ್ವಾಲ್ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಗರ್ಭಿಣಿಯರು ಹೇಗೆ ವರ್ಕೌಟ್ ಮಾಡಬೇಕು ಎಂದು ಸ್ವತಃ ಅವರೇ ವರ್ಕೌಟ್ ಮಾಡಿ ತೋರಿಸಿದ್ದ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ. ಇದೀಗ ಕಾಜಲ್ ಅಗರ್ವಾಲ್ ಪತಿ ಗೌತಮ್ ಕಿಚ್ಲು ಅವರಿಗೆ ಮುದ್ದಾಗಿ ಥ್ಯಾಂಕ್ಸ್ ಹೇಳಿದ್ದಾರೆ.

ಕಾಜಲ್ ತನ್ನ ಪತಿ ಗೌತಮ್ ಕಿಚ್ಲು ಅವರೊಂದಿಗಿನ ರೋಮ್ಯಾಂಟಿಕ್ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳುವ ಮೂಲಕ ಪ್ರೀತಿಯ ಪತಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಅವರು, ಪ್ರೀತಿಯ ಪತಿ, ಗರ್ಭಿಣಿಯಾದ ಸಮಯದಲ್ಲಿ ಹೆಣ್ಣು ಮಕ್ಕಳು ತಮ್ಮ ಪತಿ ತಂದೆಯಂತೆ ಇರಬೇಕು ಎಂದು ಬಯಸುತ್ತಾರೆ. ಅದರಂತೆ ನೀವು ಇದ್ದೀರಾ ಅದಕ್ಕೆ ಧನ್ಯವಾದ. ಅನಾರೋಗ್ಯವಿದ್ದಾಗ ವಾರಗಟ್ಟಲೆ ನನ್ನೊಂದಿಗೆ ಇದ್ದು ನೋಡಿಕೊಂಡಿದ್ದಕ್ಕಾಗಿ ಧನ್ಯವಾದಗಳು.

ನನಗೆ ಕೆಟ್ಟ ಭಾವನೆ ಬರದಂತೆ ನೋಡಿಕೊಳ್ಳುವುದು, ಯಾವಾಗಲೂ ನಾನು ಚೆನ್ನಾಗಿ ತಿನ್ನುತ್ತಿದ್ದೇನೆಯೇ ಎಂದು ಖಚಿತಪಡಿಸಿಕೊಳ್ಳುವುದು. ನನ್ನ ಆರೈಕೆಗಾಗಿ ಎಲ್ಲ ರೀತಿಯ ಕೆಲಸವನ್ನು ಮಾಡುವಿರಿ. ಕೊನೆಯದಾಗಿ ನನ್ನನ್ನು ಪ್ರೀತಿಸಿದ್ದಕ್ಕಾಗಿ ಧನ್ಯವಾದ. ನಮ್ಮ ಮಗು ಬರುವುದಕ್ಕೂ ಮುನ್ನ ನೀವು ಎಷ್ಟು ಅದ್ಭುತವಾಗಿದ್ದೀರಿ ಎಂದು ನೀವೇ ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನೀವು ಅದ್ಭುತ ತಂದೆಯಾಗುತ್ತೀರಿ ಎಂದು ಬರೆದುಕೊಂಡಿದ್ದು ಪತಿ ಜೊತೆಗಿನ ಕ್ಯೂಟ್ ಫೋಟೋವನ್ನ ಶೇರ್ ಮಾಡಿದ್ದಾರೆ.

Spread the love

Related Articles

Leave a Reply

Your email address will not be published.

Back to top button