ಬಾಲಿವುಡ್ಮನರಂಜನೆಸಿನಿಮಾ

ಬಾಲಿವುಡ್ ನಲ್ಲಿ ಮತ್ತೊಂದು ಬ್ರೇಕಪ್ ಕಹಾನಿ

ಸಿನಿಮಾ ರಂಗದಲ್ಲಿ ಬ್ರೇಕಪ್, ಪ್ಯಾಚಪ್ ಗಳೆಲ್ಲ ಕಾಮನ್. ಈಗಾಗ್ಲೆ ಅದೆಷ್ಟೋ ಮಂದಿ ದೂರವಾಗಿರೋದನ್ನ ಸಿನಿ ಇಂಡಸ್ಟ್ರಿ ಕಂಡಿದೆ. ಆದ್ರೆ ಇತ್ತೀಚೆಗೆ ಬಾಲಿವುಡ್ ನಲ್ಲಿ ಬ್ರೇಕಪ್ ಗಳು ತುಸು ಹೆಚ್ಚಾಗಿಯೇ ಸೌಂಡ್ ಮಾಡ್ತಿದೆ. ಇದೀಗ ನಟಿ ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮೆಲ್ಹೋತ್ರಾ ನಡುವೆ ಇದ್ದ ಪ್ರೀತಿಗೆ ಫುಲ್ ಸ್ಟಾಪ್ ಬಿದ್ದಿದೆ.

ಸಾಕಷ್ಟು ಬಾರಿ ಕಿಯಾರಾ ಹಾಗೂ ಸಿದ್ದಾರ್ಥ್ ವಿದೇಶಕ್ಕೆ ಒಟ್ಟಾಗಿ ತೆರಳಿ ಹಾಲಿಡೇ ಎಂಜಾಯ್ ಮಾಡಿದ್ದರು. ಶೇರ್ಷಾ ಸಿನಿಮಾದಲ್ಲಿ ಈ ಜೋಡಿಯನ್ನ ತೆರೆ ಮೇಲೆ ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದರು. ಜೊತೆಗೆ ರಿಯಲ್ ಲೈಫ್ ನಲ್ಲೂ ಜೋಡಿಗಳು ಒಂದಾಗಲಿ ಎಂದು ಹಾರೈಸಿದ್ದರು. ಆದ್ರೆ ಇವರ ಪ್ರೀತಿ ಬ್ರೇಕಪ್ ನಲ್ಲಿ ಅಂತ್ಯವಾಗಿದೆ.

ಸಾಕಷ್ಟು ಸಭೆ, ಸಮಾರಂಭಗಳಲ್ಲಿ ಕಿಯಾರಾ ಹಾಗೂ ಸಿದ್ದಾರ್ಥ್ ಒಟ್ಟಿಗೆ ಕಾಣಿಸಿಕೊಂಡಿದ್ರು. ಆದರೆ ಎಲ್ಲೂ ತಮ್ಮ ಪ್ರೀತಿಯ ಬಗ್ಗೆ ಅಧಿಕೃತವಾಗಿ ಬಾಯಿ ಬಿಟ್ಟಿರಲಿಲ್ಲ. ಆದ್ರೆ ಇದೀಗ ಈ ಜೋಡಿಗಳು ದೂರ ದೂರವಾಗಿದ್ದಾರೆ ಅನ್ನೋ ಸುದ್ದಿ ಬಿಟೌನ್ ಅಂಗಳದಲ್ಲಿ ಹರಿದಾಡ್ತಿದೆ.

ಕಿಯಾರಾ ಹಾಗೂ ಸಿದ್ದಾರ್ಥ್ ಬೇರೆ ಬೇರೆಯಾಗಿದ್ದು ಒಬ್ಬರನ್ನೊಬ್ಬರು ಭೇಟಿಯಾಗೋದನ್ನ ನಿಲ್ಲಿಸಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದೆ. ಆದ್ರೆ ಈ ಜೋಡಿಗಳು ಬೇರೆ ಬೇರೆಯಾಗೋಕೆ ಕಾರಣವೇನು ಅನ್ನೋದು ಮಾತ್ರ ಸ್ಪಷ್ಟವಾಗಿಲ್ಲ.

Spread the love

Related Articles

Leave a Reply

Your email address will not be published.

Back to top button