ಬಾಲಿವುಡ್ಮನರಂಜನೆಸಿನಿಮಾ

ಒಟಿಟಿಗೆ ಬರಲು ಸಿದ್ಧವಾದ ದಿ ಕಾಶ್ಮೀರಿ ಫೈಲ್ಸ್: ಕನ್ನಡದಲ್ಲೂ ಸಿನಿಮಾ ರಿಲೀಸ್

ಈ ವರ್ಷ ಬಾಲಿವುಡ್ ಚಿತ್ರರಂಗದಲ್ಲಿ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಸಿನಿಮಾಗಳಲ್ಲಿ ಒಂದಾಗಿರೋ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಓಟಿಟಿಗೆ ಬರಲು ಸಿದ್ದವಾಗಿದೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನ ಸ್ವತಃ ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದರು. ಅಲ್ಲದೆ ಸಿನಿಮಾ ನೋಡುವಂತೆ ತಿಳಿಸಿದ್ದರು. ಇದೀಗ ಥಿಯೇಟರ್ ನಲ್ಲಿ ಸಿನಿಮಾ ನೋಡಲು ಮಿಸ್ ಮಾಡಿಕೊಂಡವರು ಇದೀಗ ಮನೆಯಲ್ಲೇ ಕುಳಿತು ಸಿನಿಮಾ ನೋಡಬಹುದಾಗಿದೆ.

ಸಾಕಷ್ಟು ಮಂದಿಯಿಂದ ಮೆಚ್ಚುಗೆ ಪಡೆದುಕೊಂಡಿದ್ದ ದಿ ಕಾಶ್ಮೀರ್ ಸಿನಿಮಾಗೆ ಕೆಲವೊಂದಷ್ಟು ಮಂದಿಯಿಂದ ವಿರೋಧ ವ್ಯಕ್ತವಾಗಿತ್ತು. ಚಿತ್ರದಲ್ಲಿ ವೈಭವೀಕರಣ ಆಗಿದೆ, ಕೋಮು ಭಾವನೆ ಮೂಡಿಸುತ್ತೆ ಎಂಬಿತ್ಯಾದಿ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಅಂದ್ಹಾಗೆ ಕಾಶ್ಮೀರ್ ಫೈಲ್ಸ್ ಸಿನಿಮಾ ಜೀ5ನಲ್ಲಿ ತೆರೆಗೆ ಬರಲಿದೆ. ಆದ್ರೆ ಯಾವ ದಿನಾಂಕದಲ್ಲಿ ಒಟಿಟಿಯಲ್ಲಿ ಪ್ರೀಮಿಯರ್ ಆಗಲಿದೆ ಅನ್ನೋದನ್ನ ಸದ್ಯದಲ್ಲೇ ಜೀ 5 ತಿಳಿಸಲಿದೆ.

ಹಿಂದಿ ಭಾಷೆಯಲ್ಲಿ ತಯಾರಾದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಮ್ಮ ಭಾಷೆಗೂ ಡಬ್ ಆಗಬೇಕು ಎಂದು ಸಾಕಷ್ಟು ಮಂದಿ ಅಪೇಕ್ಷಿಸಿದ್ದರು. ಹೀಗಾಗಿ ಇದೀಗ ಕನ್ನಡ ಇತರ ಭಾಷೆಗಳಿಗೂ ಸಿನಿಮಾ ಡಬ್ ಆಗಿದ್ದು ಸಾಕಷ್ಟು ಅಭಿಮಾನಿಗಳು ಖುಷಿಯಾಗಿದ್ದಾರೆ.

Spread the love

Related Articles

Leave a Reply

Your email address will not be published.

Back to top button