Breaking NewsLatestಕೋಲಾರಜಿಲ್ಲಾ ಸುದ್ದಿ

ಮಾವು ಬೆಳೆಗಾರರನ್ನು ಕಾಡುತ್ತಿರುವ ಹುಳ; ರೈತರು ಆತಂಕ

ಕೋಲಾರ: ಜಿಲ್ಲೆಯ ವಾರ್ಷಿಕ ಬೆಳೆಗಳಲ್ಲಿ ಪ್ರಮುಖ ಬೆಳೆಯಾದ ಮಾವಿಗೆ ಪ್ರತಿ ವರ್ಷ ಒಂದಲ್ಲ ಒಂದು ರೀತಿಯಲ್ಲಿ ರೈತರನ್ನು ಕಾಡುತ್ತಲೇ ಇದೆ. ಈ ವರ್ಷ ಹೂವನ್ನು ನೋಡಿ ರೈತ ಹರ್ಷದಲ್ಲಿ ಇರುವಾಗಲೇ ಕಾಯಿ ಕಚ್ಚುವ ಸಂದರ್ಭದಲ್ಲಿ ಹೊಸದಾಗಿ ಈ ಭಾರಿ ಕಾಯಿ ಕೊರೆಯುವ ಹುಳ ಕಾಣಿಸಿಕೊಂಡಿದ್ದು ರೈತರಲ್ಲಿ ಆತಂಕ ಮನೆ ಮಾಡಿದೆ.

ಈ ಹುಳ ಆಂಧ್ರ ಪ್ರದೇಶದ ಚಿತ್ತೂರು ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿತ್ತು. ಕೋಲಾರ ಜಿಲ್ಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಇತ್ತಾದರೂ ಅಷ್ಟೇನು ಇದಕ್ಕೆ ಉತ್ತೇಜನ ಇರಲಿಲ್ಲ, ಗೋಡಂಬಿ ಗಿಡ ಹಾಗು ಮಾವು, ಚಕೋತ್ರದಲ್ಲಿ ಹುಳ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿತ್ತು ಎಂಬುದು ವಿಜ್ಞಾನಿಗಳು ಹೇಳುತ್ತಾರೆ.

ಆದರೆ ಕಳೆದ ಎರಡು ವರ್ಷಗಳಿಂದ ಕೋಲಾರ ಜಿಲ್ಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ಇದ್ದು ಈ ವರ್ಷ ಹೆಚ್ಚಾಗಿ ಕಾಣಿಸಿಕೊಂಡಿದೆ. ಕಳೆದ ವರ್ಷ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ, ಮುಂಗಾನಹಳ್ಳಿ ಭಾಗದ ಗೋಡಂಬಿ ಗಿಡಗಳಲ್ಲಿ ಈ ಹುಳ ಕಾಣಿಸಿಕೊಂಡಿದ್ದು ಇದು ಈಗ ಮಾವಿನ ತೋಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದೆ.

ಈ ಹುಳು ಚಿಟ್ಟೆ ಮತ್ತು ಪತಂಗ ಜಾತಿಗೆ ಸೇರಿದ್ದಾಗಿದ್ದು ಇದು ಚಿಗುರಿನ ಮೇಲೆ ಮೊಟ್ಟೆ ಇಟ್ಟು ನಂತರ 6-7ದಿನಗಳಲ್ಲಿ ಹುಳ ಆಗಿ ರೇಷ್ಮೆ ಹುಳುವಿನಂತೆ ಹಂತ ಹಂತವಾಗಿ ದೊಡ್ಡದಾಗುತ್ತದೆ. ಇದು ನಿಧಾನವಾಗಿ ತೋಟದಿಂದ ತೋಟಕ್ಕೆ ಹಬ್ಬುತ್ತದೆ ಇದನ್ನು ಪ್ರಾರಂಭದಲ್ಲಿಯೇ ಔಷಧಿ ಸಿಂಪಡಣೆ ಮೂಲಕ ಹತೋಟಿಗೆ ತರಬಹುದಾಗಿದೆ ಇದನ್ನು ತಜ್ಞರ ಸಲಹೆ ಪಡೆದು ಔಷಧಿಯನ್ನು ಸಿಂಪಡಣೆ ಮಾಡುವುದು ಉತ್ತಮ ಎಂಬ ಸಲಹೆಯನ್ನು ನೀಡಿದ್ದಾರೆ.

ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪರೆಡ್ಡಿ ಮಾತನಾಡಿ, ಈ ಹುಳ ಈ ವರ್ಷ ಮಾವಿನ ತೋಟಗಳಲ್ಲಿ ಹೆಚ್ಚಾಗಿ ಕಾಣುತ್ತಿದೆ. ಈ ಭಾರಿ ಶೇ.75 ರಷ್ಟು ಹೂವು ಕಾಣಿಸಿಕೊಂಡಿತ್ತು. ಚಿಗುರಿನ ಕಾಟ ಹಾಗು ಕೀಟ ಬಾಧೆಗಳಿಂದ ಶೇ.50ರಷ್ಟು ಪಿಂದೆ ಕಟ್ಟಿದೆ ಅದಕ್ಕೂ ಕಾಯಿ ಕೊರೆಯುವ ಹುಳ ಕಾಣಿಸಿಕೊಂಡು ರೈತರನ್ನು ಆತಂಕಕ್ಕೆ ಗುರಿ ಮಾಡಿದೆ. ಔಷಧಿ ಇದಕ್ಕೆ ಮುಖ್ಯವಾಗಿದೆ. ಸರ್ಕಾರ ಇದನ್ನು ಪರಿಗಣನೆಗೆ ತೆಗೆದುಕೊಂಡು ಕನಿಷ್ಟ ರಿಯಾಯಿತಿ ದರದಲ್ಲಾದರೂ ಔಷಧಿ ನೀಡುವ ಕೆಲಸ ಮಾಡಬೇಕಾಗಿ ಒತ್ತಾಯಪಡಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button