Latestಬಾಲಿವುಡ್ರಾಷ್ಟ್ರೀಯಸುದ್ದಿಸೆಲೆಬ್ರಿಟಿ

ಅಜಯ್ ದೇವಗನ್ ಪರ ಬ್ಯಾಟ್ ಬೀಸಿದ ವಿವಾದಾತ್ಮಕ ನಟಿ ಕಂಗನಾ!

ಬಾಲಿವುಡ್‌ನ ವಿವಾದಾತ್ಮಕ ನಟಿ ಕಂಗನಾ ರಣಾವತ್, ಹಿಂದಿ ನಮ್ಮ ರಾಷ್ಟ್ರ ಭಾಷೆ ಅಂತ ಅಭಿಪ್ರಾಯ ಪಟ್ಟಿದ್ದಾರೆ. ‘’ನಮ್ಮದು ವೈವಿಧ್ಯತೆಯ ದೇಶ. ಇಲ್ಲಿ ಭಾಷೆಗಳು, ಸಂಸ್ಕೃತಿಗಳು ತುಂಬಿರುವ ದೇಶವಾಗಿದೆ. ನಮ್ಮ ಸಂಸ್ಕೃತಿ ಮತ್ತು ಭಾಷೆಯ ಬಗ್ಗೆ ಹೆಮ್ಮೆ ಪಡುವುದು ನಮ್ಮ ಜನ್ಮಸಿದ್ಧ ಹಕ್ಕು. ನಾನು ಪಹಾಡಿ. ಆದರೂ, ನಾವು ನಮ್ಮ ರಾಷ್ಟ್ರವನ್ನು ಪರಿಗಣಿಸಿದಾಗ, ಅದನ್ನು ಒಂದುಗೂಡಿಸಲು ನಮ್ಮೆಲ್ಲರನ್ನೂ ಒಟ್ಟುಗೂಡಿಸಲು ಒಂದು ಥ್ರೆಡ್ ಅಗತ್ಯವಿದೆ. ಸಂವಿಧಾನ ರಚನೆಯಾದಾಗ ಹಿಂದಿ ರಾಷ್ಟ್ರ ಭಾಷೆಯಾಯಿತು. ಹೀಗಾಗಿ ಹಿಂದಿಯೇ ನಮ್ಮ ರಾಷ್ಟ್ರ ಭಾಷೆ ಎಂದಿದ್ದಾರೆ.
‘‘ಸದ್ಯಕ್ಕೆ ಹಿಂದಿ ನಮ್ಮ ರಾಷ್ಟ್ರ ಭಾಷೆ. ನನ್ನ ಅಭಿಪ್ರಾಯದಲ್ಲಿ ಸಂಸ್ಕೃತ ನಮ್ಮ ರಾಷ್ಟ್ರ ಭಾಷೆಯಾಗಬೇಕು’’ ಎಂದು ನಟಿ ಕಂಗನಾ ಅಭಿಪ್ರಾಯ ಪಟ್ಟಿದ್ದಾರೆ. “ಈಗಿನಂತೆ, ಸಂವಿಧಾನದ ಪ್ರಕಾರ ಹಿಂದಿ ರಾಷ್ಟ್ರೀಯ ಭಾಷೆಯಾಗಿದೆ. ಹಾಗಾಗಿ ಹಿಂದಿ ಭಾರತದ ರಾಷ್ಟ್ರ ಭಾಷೆ ಎಂದು ಅಜಯ್ ದೇವಗನ್ ಜಿ ಹೇಳಿದಾಗ ಅವರು ತಪ್ಪಾಗಿಲ್ಲ ಅಂತ ಕಂಗನಾ ಹೇಳಿದ್ದಾರೆ.
ಸಂಸ್ಕೃತ ನಮ್ಮ ರಾಷ್ಟ್ರ ಭಾಷೆಯಾಗಬೇಕು ಎಂದು ನಾನು ಹೇಳುತ್ತೇನೆ. ಹಿಂದಿ, ಜರ್ಮನಿ, ಇಂಗ್ಲಿಷ್, ಫ್ರೆಂಚ್ ಮುಂತಾದ ಭಾಷೆಗಳು ಸಂಸ್ಕೃತದಿಂದ ಹುಟ್ಟಿಕೊಂಡಿವೆ, ನಮಗೆ ಸಂಸ್ಕೃತ ಏಕೆ ರಾಷ್ಟ್ರ ಭಾಷೆಯಾಗಿಲ್ಲ? ಶಾಲೆಗಳಲ್ಲಿ ಏಕೆ ಕಡ್ಡಾಯವಾಗಿಲ್ಲ? ಅದು ನನಗೆ ತಿಳಿದಿಲ್ಲ! ” ಅಂತ ಅವರು ಹೇಳಿದ್ದಾರೆ.

Spread the love

Related Articles

Leave a Reply

Your email address will not be published.

Back to top button