
ಮೆಲ್ಬೋನ್: ಆಸ್ಟ್ರೇಲಿಯನ್ ಓಪನ್ 2022 ರಲ್ಲಿ ಸೆರ್ಬಿಯಾದ ಆಟಗಾರ ನೊವಾಕ್ ಜೊಕೊವಿಕ್ ಭಾಗವಹಿಸುವುದು ಬಹಳ ಅನುಮಾನಕ್ಕೆ ಕಾರಣವಾಗಿದೆ, ಕಾರಣ ಅಲ್ಲಿನ ವಲಸೆ ಸಚಿವರು ಎರಡನೇ ಬಾರಿ ಅವರ ವೀಸಾವನ್ನು ರದ್ದುಗೊಳಿಸಿದ್ದಾರೆ. ಈ ಕುರಿತು ಆಸ್ಟ್ರೇಲಿಯಾದ ವಲಸೆ ಸಚಿವ ಅಲೆಕ್ಸ್ ಹಾಕ್ ಹೇಳಿಕೆ ನೀಡಿ , ಜೊಕೊವಿಕ್ ಅವರ ವೀಸಾವನ್ನು ರದ್ದುಗೊಳಿಸಿ ಟೆನಿಸ್ ತಾರೆಯನ್ನು ಗಡೀಪಾರು ಮಾಡಲು ಸೆಕ್ಷನ್ 133C(3) ಬಳಸಿರುವುದಾಗಿ ಹೇಳಿದ್ದಾರೆ. .
ಜೊಕೊವಿಕ್ ಅವರು ದಾಖಲೆಯ 10ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಹಾಗೂ 21ನೇ ಗ್ರ್ಯಾಂಡ್ ಸ್ಲಾಮ್ ಅನ್ನು ಬೆನ್ನಟ್ಟಿ ಆಸ್ಟ್ರೇಲಿಯಾಕ್ಕೆ ಆಗಮಿಸಿದ್ದರು.
ವಲಸೆ ಕಾಯಿದೆಯ ಸೆಕ್ಷನ್ 133C (3) ಅಡಿಯಲ್ಲಿ ಅಧಿಕಾರವನ್ನು ಆರೋಗ್ಯ ಮತ್ತು ಉತ್ತಮ ಸುವ್ಯವಸ್ಥೆಯ ಆಧಾರದ ಮೇಲೆ ಬಳಸಿ ಜೊಕೊವಿಕ್ ಹೊಂದಿದ್ದ ವೀಸಾವನ್ನು ರದ್ದುಪಡಿಸಿರುವುದಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ. ಈ ನಿರ್ಧಾರ ತೆಗೆದುಕೊಳ್ಳುವಾಗ, ಗೃಹ ವ್ಯವಹಾರಗಳ ಇಲಾಖೆ, ಆಸ್ಟ್ರೇಲಿಯನ್ ಬಾರ್ಡರ್ ಫೋರ್ಸ್ ಮತ್ತು ಆಟಗಾರ ಜೊಕೊವಿಕ್ ಒದಗಿಸಿದ್ದ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಗಣಿಸಿರುವುದಾಗಿಯೂ ಸಚಿವರು ಹೇಳಿದ್ದಾರೆ.
ಇದರಿಂದ ಜೊಕೊವಿಕ್ ಈಗ ಮತ್ತೊಮ್ಮೆ ನ್ಯಾಯಾಲಯದ ಮೊರೆ ಹೋಗಬೇಕಾಗಿದೆ, ಆದರೆ ಪ್ರಕರಣ ಪಂದ್ಯಾವಳಿ ಆರಂಭವಾಗುವ ಮುನ್ನ ಅಂದರೆ ಇದೆ 17 ಕ್ಕೆ ಮೊದಲು ಇತ್ಯರ್ಥ ವಾಗುವ ಸಾಧ್ಯತೆ ಕಡಿಮೆಯಿರುವುದರಿಂದ ಪಂದ್ಯಾವಳಿಯಲ್ಲಿ ಭಾಗವಹಿಸುವುದು ಬಹಳ ಬಹಳ, ಬಹಳ ಅನುಮಾನವಾಗಿದೆ.