Latestಕಲೆ/ ಸಾಹಿತ್ಯಜಿಲ್ಲಾ ಸುದ್ದಿತುಮಕೂರುರಾಜ್ಯಸಂಗೀತ/ನೃತ್ಯಸುದ್ದಿ

ಶ್ರೀಗಳ ಜಯಂತೋತ್ಸವದಲ್ಲಿ ನಾದಬ್ರಹ್ಮ ಹಂಸಲೇಖ ತಂಡದಿಂದ ಹಾಡು ಮತ್ತು ನೃತ್ಯದ ಮೆರುಗು!

ತುಮಕೂರು: ಏಪ್ರಿಲ್ 1ರಂದು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಶ್ರೀಗಳ 115ನೇ ಜಯಂತೋತ್ಸವ ಆಚರಣೆಯನ್ನ ಅದ್ದೂರಿಯಾಗಿ ಆಚರಣೆ ಮಾಡಲಾಯ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಇಡೀ ರಾಜ್ಯಡಳಿತದ ಗಣ್ಯಾತಿಗಣ್ಯರು ಆಗಮಿಸಿದ್ದರು.

ಇದರೊಟ್ಟಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಡೊಳ್ಳು ಕುಣಿತ, ನಗಾರಿ, ತಮಟೆ ವಾದ್ಯ, ಹೆಣ್ಣು ಮಕ್ಕಳಿಂದ 115 ಕಳಸ ಕುಂಭ ಮೆರವಣಿಗೆ, 115 ಮಕ್ಕಳಿಗೆ ನಾಮಕರಣದ ಜೊತೆಗೆ ತೊಟ್ಟಿಲು ಕೊಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಲಾಯ್ತು. ಇನ್ನು ಕಾರ್ಯಕ್ರಮವನ್ನ ಮತ್ತಷ್ಟು ಯಶಸ್ವಿಗೊಳಿಸಲು ನಾದಬ್ರಹ್ಮ ಹಂಸಲೇಖರವರ ತಂಡದಿಂದ ಗೀತಗಾಯನ ಹಮ್ಮಿಕೊಳ್ಳಲಾಗಿತ್ತು.

ಗಾಯನ ತಂಡ

ಶ್ರೀಗಳ ಗುರುವಂದನೆ ಕಾರ್ಯಕ್ರಮದ ಭಾಗವಾಗಿ ಶ್ರಿ ಶಿಸ್ವ ಎಂಬ ಅಂಕಿತ ನಾಮದೊಂದಿಗೆ ಅವರು ನಡೆದು ಬಂದ ಹಾದಿಯನ್ನ ಅವರ ಭಾವ ಚಿತ್ರ ಹಾಗೂ ಪಾದುಕೆಗಳ ಮುಂದೆ ಪ್ರಸ್ತುತ ಪಡಿಸಲಾಯ್ತು. ಕಾರ್ಯಕ್ರಮದಲ್ಲಿ 115 ಸಂಗೀತಗಾರರು ಭಾಗವಹಿಸಿದ್ದು ವಿಶೇಷವಾಗಿತ್ತು. ನಾಡಿನ ಹೆಸರಾಂತ ಕಲಾವಿದರಾದ ವಿಜಯಪ್ರಕಾಶ್, ಅನುರಾಧ ಭಟ್, ಡಾ, ಅರ್ಚನಾ ಪ್ರಕಾಶ್, ಗೌತಮಿ ಮಧು ವಸಿಷ್ಠ, ಕುಮಾರಿ ಪೂಜಾ, ಶ್ರೀಮತಿ ಮದನಿಕಾ ಮಂಜುನಾಥ್ ಸೇರಿದಂತೆ ದೇಸಿ ಕಾಲೇಜು ವಿದ್ಯಾರ್ಥಿಗಳಾದ ದೇವರಾಜ್, ಮೇಘನಾ, ಸಂಜನಾ ಮಂಜು ಸೇರಿದಂತೆ 115ಮಂದಿ ಗಾಯಕರು ಭಾಗವಹಿಸಿದ್ದರು.

ಶ್ರೀಗಳ ಗುರುವಂದನೆಗೆ ಸಿದ್ದವಾಗಿದ್ದ ಅದ್ದೂರಿ ವೇದಿಕೆ

ಇಡೀ ಸಂಗೀತ ಕಾರ್ಯಕ್ರಮದ ಉಸ್ತುವಾರಿಯನ್ನ ಹಂಸಲೇಖಾ ಮಗಳು ತೇಜಸ್ವಿನಿ ಹಂಸಲೇಖಾ ವಹಿಸಿಕೊಂಡು ನೆರೆದಿದ್ದವರ ಹೃದಯಮುಟ್ಟುವಂತೆ ನಡೆಸಿಕೊಟ್ಟರು. ಇನ್ನು ಬಸವ ಭಾರತ ಹಾಗೂ ಬಸವಪುರಾಣವನ್ನ ಹಾಡು ಮತ್ತು ನೃತ್ಯದ ಮೂಲಕ ಪ್ರಸ್ತುತ ಪಡಿಸಲಾಯ್ತು. ಕಲಾವಿದರಿಗೆ ರಾಮಕೃಷ್ಣ ಬೆಳ್ತೂರು ಆಕರ್ಷಕವಾಗಿ ಮೇಕಪ್ ಮಾಡಿದ್ದು ಗುರುತಿಸುವಂತಿತ್ತು. ಇಡೀ ತಂಡವನ್ನ ನೆರೆದಿದ್ದವರು ಕೊಂಡಾಡಿದ್ದು ಗಮನಾರ್ಹ.

Spread the love

Related Articles

Leave a Reply

Your email address will not be published.

Back to top button