ಆಹಾರಲೈಫ್ ಸ್ಟೈಲ್

ಬಾಳೆಹಣ್ಣಿನ ಬಜ್ಜಿ

ಬೇಕಾಗುವ ಸಾಮಾಗ್ರಿಗಳು

ಮೈದಾ ಹಿಟ್ಟು- ಅರ್ಧ ಬಟ್ಟಲು
ಅಕ್ಕಿ ಹಿಟ್ಟು – 2 ಚಮಚ
ಚುಕ್ಕಿ ಬಾಳೆಹಣ್ಣು- 3
ಸಕ್ಕರೆ- 2 ಚಮಚ
ಅರಿಶಿನದ ಪುಡಿ- ಅರ್ಧ ಚಮಚ
ಏಲಕ್ಕಿ ಪುಡಿ- ಕಾಲು ಚಮಚ
ಎಣ್ಣೆ- ಕರಿಯಲು
ಮಾಡುವ ವಿಧಾನ: ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಸಕ್ಕರೆ, ಅರಿಶಿನದ ಪುಡಿ, ಏಲಕ್ಕಿ ಪುಡಿ ಹಾಗೂ ಸ್ವಲ್ಪ ನೀರು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ನಂತರ ಚುಕ್ಕಿ ಬಾಳೆಹಣ್ಣಿನ ಸಿಪ್ಪೆ ತೆಗೆದು ಉದ್ದಕ್ಕೆ ಸಣ್ಣಗೆ ಕತ್ತರಿಸಿಕೊಳ್ಳಬೇಕು. ನಂತರ ಒಲೆಯ ಮೇಲೆ ಎಣ್ಣೆ ಇಟ್ಟು ಕಾದ ನಂತರ ಹಿಟ್ಟಿಗೆ ಕತ್ತರಿಸಿದ ಬಾಳೆಹಣ್ಣನ್ನು ಅದ್ದಿ ಎಣ್ಣೆಗೆ ಹಾಕಿ ಗರಿ ಗರಿ ಬಣ್ಣ ಬರುವವರೆಗೆ ಕರಿದರೆ ರುಚಿಕರವಾದ ಬಾಳೆಹಣ್ಣಿನ ಬಜ್ಜಿ ಸವಿಯಲು ಸಿದ್ಧ.

Spread the love

Related Articles

Leave a Reply

Your email address will not be published.

Back to top button