ಫ್ಯಾಷನ್ಲೈಫ್ ಸ್ಟೈಲ್

ಫೇಸ್ ಪ್ಯಾಕ್ ಹಚ್ಚಿದರೂ ಮುಖದ ಕಾಂತಿ ಹೆಚ್ಚಾಗದಿರುವುದಕ್ಕೆ ನಿಮ್ಮ ಈ ತಪ್ಪುಗಳೇ ಕಾರಣ

  • – ಪವಿತ್ರಾ

ಹೆಚ್ಚಿನ ಮಹಿಳೆಯರು ದೋಷರಹಿತ ಚರ್ಮವನ್ನು ಹೊಂದಲು ಬಯಸುತ್ತಾರೆ. ಹಾಗೇ ಹೊಳೆಯುವ ತ್ವಚೆಯನ್ನು ಹೊಂದಲು ಬಯಸುತ್ತಾರೆ. ಅದಕ್ಕಾಗಿ ಕೆಲವರು ಹಲವು ಬಗೆಯ ಫೇಸ್ ಪ್ಯಾಕ್ ಗಳನ್ನು ಬಳಸುತ್ತಾರೆ. ಆದರೂ ಇದರಿಂದ ಅವರ ಮೈಕಾಂತಿ ಹೆಚ್ಚಾಗುವುದಿಲ್ಲ. ಇದಕ್ಕೆ ಕಾರಣವೇನೆಂಬುದನ್ನು ತಿಳಿದುಕೊಳ್ಳೋಣ.

-ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಿದ ಬಳಿಕ ಮುಖವನ್ನು ಸ್ಕ್ರಬ್ ಮಾಡಬೇಡಿ. ಮುಖವನ್ನು ನೀರಿನಲ್ಲಿ ನೆನೆಸಿ ಬಳಿ ನಿಧಾನವಾಗಿ ಸ್ಕ್ರಬ್ ಮಾಡಿ. ಇದರಿಂದ ಚರ್ಮ ಚೆನ್ನಾಗಿ ಸ್ವಚ್ಛಗೊಳ್ಳುತ್ತದೆ.

-ಮುಖಕ್ಕೆ ಫೇಸ್ ಪ್ಯಾಕ್ ಹಚ್ಚಿದ ಬಳಿಕ ಅದು ಒಣಗುವವರೆಗೂ ಮಾತನಾಡದೆ ಸುಮ್ಮನೆ ಕುಳಿತುಕೊಳ್ಳಿ. ಫೇಸ್ ಪ್ಯಾಕ್ ಒಣಗಿ ಚರ್ಮವನ್ನು ಬಿಗಿಗೊಳಿಸುತ್ತದೆ. ಇಲ್ಲವಾದರೆ ಚರ್ಮದಲ್ಲಿ ಸುಕ್ಕುಗಳು, ಗೆರೆಗಳು ಮೂಡುತ್ತವೆ.

-ಫೇಸ್ ಪ್ಯಾಕ್ ತೆಗೆಯಲು ಕೆಲವರು ಮುಖಕ್ಕೆ ಬಿಸಿ ನೀರನ್ನು ಬಳಸುತ್ತಾರೆ. ಇದು ತಪ್ಪು. ಇದರಿಂದ ಚರ್ಮ ಹಾನಿಗೊಳಗಾಗುತ್ತದೆ. ಹಾಗಾಗಿ ಮುಖವನ್ನು ತಣ್ಣೀರಿನಲ್ಲಿ ತೊಳೆಯಿರಿ.

-ಯಾವುದೇ ಫೇಸ್ ಪ್ಯಾಕ್ ಅನ್ನು 15 -20 ನಿಮಿಷಗಳಿಗಿಂತ ಹೆಚ್ಚು ಕಾಲ ಇರಿಸಿಕೊಳ್ಳಬೇಡಿ. ಕೆಲವೊಮ್ಮೆ ನಾವು ಹೆಚ್ಚು ಕಾಲ ಇಡುವುದರಿಂದ ಮುಖದ ತೇವಾಂಶ ಹೀರಿಕೊಂಡು ಚರ್ಮದ ರಫ್ ಆಗುತ್ತದೆ. ದದ್ದು ಮತ್ತು ತುರಿಕೆಗೆ ಕಾರಣವಾಗುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button