ಆರೋಗ್ಯಲೈಫ್ ಸ್ಟೈಲ್
ಎಷ್ಟು ಹೊತ್ತು ವಾಕಿಂಗ್ ಮಾಡಬೇಕು?

- – ಪವಿತ್ರಾ
ಮನೆಯಿಂದಲೇ ಕೆಲಸ ಮಾಡಲು ಅನುಮತಿ ದೊರೆತ ಬಳಿಕ ಪ್ರತಿಯೊಬ್ಬರಿಗೂ ವಾಕಿಂಗ್ ನ ಮಹತ್ವದ ಅರಿವಾಗಿದೆ. ನಿತ್ಯ ಎಷ್ಟು ಹೊತ್ತಿನ ವಾಕಿಂಗ್ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಮಾತ್ರ ಸದ್ಯದ ಪ್ರಶ್ನೆ.
ನಿತ್ಯ ವಾಕಿಂಗ್ ಮಾಡುವವರು ಕನಿಷ್ಠ 20 ನಿಮಿಷವನ್ನಾದರೂ ವಾಕಿಂಗ್ ಗೆ ಮೀಸಲಿಡುವುದು ಒಳ್ಳೆಯದು ಅನ್ನುತ್ತದೆ ಅಧ್ಯಯನ. ಸಮಯವಿದೆ ಎಂಬ ಕಾರಣಕ್ಕೆ 45 ನಿಮಿಷಕ್ಕಿಂತ ಹೆಚ್ಚಿನ ಹೊತ್ತು ನಡಿಗೆಯಲ್ಲಿ ತೊಡಗಿಕೊಳ್ಳುವುದು ಆರೋಗ್ಯಕ್ಕೂ ಒಳ್ಳೆಯದಲ್ಲವಂತೆ.
ನಿಮ್ಮ ನಡಿಗೆ ವೇಗ ಪಡೆದಷ್ಟೂ ಲಾಭ ಜಾಸ್ತಿ ಎಂಬುದನ್ನು ತಿಳಿದುಕೊಳ್ಳಿ. ಮೆದುಳಿಗೆ ಬರುವ ಅಪಾಯಗಳನ್ನು ತಪ್ಪಿಸಲು ನಡಿಗೆಗೆ ಸಾಧ್ಯವಿದೆ. ಪಾರ್ಶ್ವವಾಯುವಿನ ಸಾಧ್ಯತೆಯನ್ನು ಇದು ಶೇ. 30ರಷ್ಟು ಕಡಿಮೆ ಮಾಡುತ್ತದೆ.
ರಕ್ತದ ಸಕ್ಕರೆಯ ಪ್ರಮಾಣವನ್ನೂ ನಿಯಂತ್ರಿಸುತ್ತದೆ. ಊಟ ಮಾಡಿದ ಬಳಿಕ 15 ನಿಮಿಷ ವಾಕ್ ಮಾಡಿದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸಹಜವಾಗಿಯೇ ಕಡಿಮೆಯಾಗುತ್ತದೆ. ಗಂಟು ನೋವು, ಕೀಲು ನೋವಿನ ಸಮಸ್ಯೆ ಇರುವವರು ನಿತ್ಯ ನಡೆಯುವುದರಿಂದ ಸಂಧಿವಾತ ನೋವು ಕಡಿಮೆಯಾಗುತ್ತದೆ.