ನಿದ್ರೆಯಿಂದ ತೂಕ ಕಡಿಮೆ ಮಾಡಿಕೊಳ್ಳಬಹುದೇ?

- – ಪವಿತ್ರಾ
ನಿದ್ರೆ ಮಾಡಿದರೆ ತೂಕ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ಆದರೆ, ನಿದ್ರೆ ಮಾಡುವುದರಿಂದ ಕೂಡ ತೂಕವನ್ನು ಇಳಿಸಿಕೊಳ್ಳಬಹುದಂತೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಹಲವಾರು ಪ್ರಯತ್ನ ಮಾಡುವವರು ಹೆಚ್ಚು ನಿದ್ರೆ ಮಾಡಿ. ಇದು ತೂಕ ಇಳಿಸಿಕೊಳ್ಳಲು ಸಹಕಾರಿ ಎನ್ನಲಾಗಿದೆ. ಹಾಗಾದರೆ ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳೋಣ.
ನಿದ್ರೆ ಕಡಿಮೆಯಾದಾಗ ಅತಿಯಾಗಿ ತಿನ್ನುವ ಬಯಕೆ ಹೆಚ್ಚುತ್ತದೆ. ಹಸಿವಿನ ಹಾರ್ಮೋನ್ ಗಳಾದ ಲೆಪ್ಟಿನ್ ಮತ್ತು ಗ್ರೆಲಿನ್ ನಿದ್ರೆಯ ಸಮಯದಲ್ಲಿ ಉತ್ಪತ್ತಿಯಾಗುತ್ತದೆ. ನಿದ್ರೆಯ ಕೊರತೆಯಾದಾಗ ಈ ಹಾರ್ಮೋನ್ ಗಳ ಉತ್ಪಾದನೆಯಲ್ಲಿ ವ್ಯತ್ಯಾಸವಾಗುತ್ತದೆ. ಗ್ರೆಲಿನ್ ಹಸಿವನ್ನು ಹೆಚ್ಚಿಸಿದರೆ ಲೆಪ್ಟಿನ್ ಹಸಿವನ್ನು ನಿಯಂತ್ರಿಸುತ್ತದೆ. ನಿದ್ರೆಯ ಕೊರತೆಯಿಂದ ಇವುಗಳಲ್ಲಿ ವ್ಯತ್ಯಾಸವಾಗಿ ಆಹಾರದ ಮೇಲೆ ನಿಯಂತ್ರಣ ತಪ್ಪುತ್ತದೆ.
ನೀವು ನಿದ್ರೆ ಮಾಡುವಾಗ ಸ್ನಾಯು ಮತ್ತು ಅಂಗಾಂಶಗಳು ವಿಶ್ರಾಂತಿ ಪಡೆಯುತ್ತವೆ. ಆದರೆ ಸರಿಯಾಗಿ ನಿದ್ರಿಸದಿದ್ದಾಗ ದೇಹಕ್ಕೆ ದಣಿವು ಹೆಚ್ಚಾಗುತ್ತದೆ. ಇದರಿಂದ ವ್ಯಾಯಾಮ, ವಾಕಿಂಗ್ ಮುಂತಾದವುಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇದರಿಂದ ದೇಹದ ತೂಕ ಹೆಚ್ಚಾಗುತ್ತದೆ.
ದೇಹದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ದೇಹದ ಜೀವಕೋಶಗಳಿಗೆ ಶಕ್ತಿಯಾಗಿ ನೀಡುತ್ತದೆ. ಆದರೆ ಕಡಿಮೆ ನಿದ್ರೆಯಿಂದ ಇನ್ಸುಲಿನ್ ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿ ಇದರಿಂದ ಡಯಾಬಿಟಿಸ್ ಮತ್ತು ತೂಕ ಹೆಚ್ಚಳ ಸಮಸ್ಯೆ ಕಾಡುತ್ತದೆ.