ಹಲ್ಲುಗಳನ್ನು ತೆಗೆದ ಬಳಿಕ ಈ ಟಿಪ್ಸ್ ಫಾಲೋ ಮಾಡಿ

- – ಪವಿತ್ರಾ
ಹಲ್ಲುಗಳನ್ನು ತೆಗೆಯುವ ಪ್ರಕ್ರಿಯೆ ತುಂಬಾ ನೋವಿನಿಂದ ಕೂಡಿರುತ್ತದೆ. ಹಲ್ಲುಗಳನ್ನು ತೆಗೆದ ಬಳಿಕ ವೈದ್ಯರು ಸರಿಯಾಗಿ ನೋಡಿಕೊಳ್ಳುವಂತೆ ಸಲಹೆ ನೀಡುತ್ತಾರೆ. ಇಲ್ಲವಾದರೆ ಹಲ್ಲು ತೆಗೆದ ಪ್ರದೇಶದಲ್ಲಿ ಸೋಂಕು ಉಂಟಾಗಿ ಇನ್ನು ಹಲವು ಸಮಸ್ಯೆ ಕಾಡಬಹುದು. ಹಾಗಾಗಿ ಹಲ್ಲು ತೆಗೆದ ಬಳಿಕ ಈ ರೀತಿಯಲ್ಲಿ ಆರೈಕೆ ಮಾಡಿ.
-ಹಲ್ಲುಗಳನ್ನು ತೆಗೆದ ಬಳಿಕ ಆ ಪ್ರದೇಶವನ್ನು ಪದೇ ಪದೆ ಮುಟ್ಟಬೇಡಿ. ಇದರಿಂದ ಸೋಂಕು ಉಂಟಾಗಬಹುದು.
-ಬಾಯಿಯ ಒಳಭಾಗವನ್ನು ಹೆಚ್ಚಾಗಿ ತೊಳೆಯಬೇಡಿ. ತೊಳೆದರೂ ಹೆಚ್ಚು ಬಲವನ್ನು ಹಾಕಬೇಡಿ.
-ನಿಮಗೆ ನೋವು ಇದ್ದರೆ ಬಾಯಿಯ ಹೊರಭಾಗದಿಂದ ಕೆನ್ನೆಗಳ ಮೇಲೆ ಐಸ್ ಪ್ಯಾಕ್ ಅನ್ನು ಅನ್ವಯಿಸಿ.
-ನಿಮಗೆ ತುಂಬಾ ನೋವಿದ್ದರೆ ದಂತ ವೈದ್ಯರ ಸಲಹೆಯಂತೆ ನೋವು ನಿವಾರಕಗಳನ್ನು ಸೇವಿಸಿ.
-ಹಲ್ಲು ತೆಗೆದ ಪ್ರದೇಶದಲ್ಲಿ ರಕ್ತ ಸ್ರಾವವಾಗುತ್ತಿದ್ದರೆ ಟೀ ಬ್ಯಾಗ್ ಗಳನ್ನು ಇರಿಸಿ. ಇದು ರಕ್ತ ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ.
-ಹಲ್ಲು ತೆಗೆದ ನಂತರ ಆಹಾರ ಸೇವಿಸುವಾಗ ಎಚ್ಚರವಿರಲಿ. ತುಂಬಾ ಗಟ್ಟಿಯಾದ ಪದಾರ್ಥಗಳನ್ನು ಸೇವಿಸಬೇಡಿ, ಇದರಿಂದ ರಕ್ತಸ್ರಾವವಾಗಬಹುದು. ಮೃದುವಾದ ಮತ್ತು ದ್ರವ ರೂಪದ ಆಹಾರಗಳನ್ನು ಸೇವಿಸಿ.
-ಹಲ್ಲುಗಳನ್ನು ತೆಗೆದ ಬಳಿಕ ನೈರ್ಮಲ್ಯವನ್ನು ಕಾಪಾಡಿ. ಹಲ್ಲು ತೆಗೆದ ಬಳಿಕ ರಾತ್ರಿಯ ವೇಳೆ ನಿಧಾನವಾಗಿ ಹಲ್ಲುಗಳನ್ನು ಉಜ್ಜಿ. ಅದರಲ್ಲೂ ಊಟ ಮಾಡಿದ ಬಳಿಕ ಹಲ್ಲುಗಳನ್ನು ಉಜ್ಜಿ. ಬಾಯಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ.