ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಯಾವ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಗೊತ್ತಾ?

- – ಪವಿತ್ರಾ
ದೇಹದಲ್ಲಿ 2 ಬಗೆಯ ಕೊಲೆಸ್ಟ್ರಾಲ್ ಗಳಿರುತ್ತದೆ. ಒಂದು ಉತ್ತಮ ಕೊಲೆಸ್ಟ್ರಾಲ್ ಮತ್ತೊಂದು ಕೆಟ್ಟ ಕೊಲೆಸ್ಟ್ರಾಲ್. ಕೆಟ್ಟ ಕೊಲೆಸ್ಟ್ರಾಲ್ ಹೃದಯಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ಇವುಗಳನ್ನು ಕಡಿಮೆ ಮಾಡಲು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬೇಕು. ಅದಕ್ಕಾಗಿ ಪ್ರತಿದಿನ ಯಾವ ಆಹಾರವನ್ನು ಎಷ್ಟು ಸೇವಿಸಬೇಕು ಎಂಬುದನ್ನು ತಿಳಿಯಿರಿ.
ಸಾಲ್ಮನ್ ಮೀನು : ಇದು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ವಾರದಲ್ಲಿ ನಾಲ್ಕು ಬಾರಿ 115 ಗ್ರಾಂನಷ್ಟು ಸೇವಿಸಿದರೆ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇದು ಸಂಶೋಧನೆಯಿಂದ ದೃಢಪಟ್ಟಿದೆ.
ಬೆರ್ರಿ ಹಣ್ಣು ಗಳು : ಈ ಹಣ್ಣುಗಳು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ವಯಸ್ಕರು 8 ವಾರಗಳ ಕಾಲ ದಿನಕ್ಕೆ ಒಂದು ಕಪ್ ಹಣ್ಣುಗಳನ್ನು ಸೇವಿಸಿದರೆ ಉತ್ತಮ ಕೊಲೆಸ್ಟ್ರಾಲ್ ಮಟ್ಟವು 5 ಪ್ರತಿಶತದಷ್ಟು ಹೆಚ್ಚಾಗುತ್ತದೆಯಂತೆ.
ಡಾರ್ಕ್ ಚಾಕೋಲೇಟ್ : ಚಾಕೋಲೇಟ್ ಸೇವಿಸುವುದರಿಂದ ಕೂಡ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುತ್ತದೆ. ಹಾಗಾಗಿ ಪ್ರತಿದಿನ 100ಗ್ರಾಂನಷ್ಟು ಡಾರ್ಕ್ ಚಾಕೋಲೇಟ್ ಸೇವಿಸಿ.
ಮೊಟ್ಟೆಗಳು : ಮೊಟ್ಟೆಗಳಲ್ಲಿರುವ ಪೋಷಕಾಂಶಗಳು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಲು ಸಹಕಾರಿಯಾಗಿವೆ, ಹಾಗಾಗಿ 12 ವಾರಗಳವರೆಗೆ ಪ್ರತಿದಿನ ಮೊಟ್ಟೆಯನ್ನು ಸೇವಿಸಿದರೆ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಶೇ. 48ರಷ್ಟು ಹೆಚ್ಚಾಗುತ್ತದೆ.