ಆಹಾರಲೈಫ್ ಸ್ಟೈಲ್

ಎಣ್ಣೆ ಬಳಸದೆ ನಿಂಬೆಯಿಂದ ಹುಳಿ- ಸಿಹಿ ಉಪ್ಪಿನಕಾಯಿ ತಯಾರಿಸುವುದು ಹೇಗೆ ಗೊತ್ತಾ?

– ಪವಿತ್ರಾ

ಮಾವು, ನಿಂಬೆ, ಮೆಣಸಿನಕಾಯಿ ಉಪ್ಪಿನಕಾಯಿ, ಕೊತ್ತಂಬರಿ –ಪುದೀನಾ ಚಟ್ನಿ, ಹುಣಸೆ ಚಟ್ನಿ ಮುಂತಾದವುಗಳನ್ನು ಮಾಡಿ ಮನೆಯಲ್ಲಿ ಇಡಲಾಗುತ್ತದೆ. ಅದೇರೀತಿ ನಿಂಬೆ ಹಣ್ಣಿನಿಂದ ಹುಳಿ ಸಿಹಿ ಉಪ್ಪಿನಕಾಯಿ ತಯಾರಿಸಿಟ್ಟುಕೊಂಡರೆ ಅದನ್ನು ಊಟಕ್ಕೆ ಯಾವಾಗ ಬೇಕೋ ಆವಾಗ ಬಳಸಿಕೊಳ್ಳಬಹುದು. ಹಾಗಾದ್ರೆ ಅದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.

ಬೇಕಾಗುವ ಸಾಮಾಗ್ರಿಗಳು :

1 ಚಮಚ ಕೊತ್ತಂಬರಿ ಬೀಜ, 1 ಚಮಚ ಸೊಂಪು, 20-25 ಕರಿಮೆಣಸು, 1 ಚಮಚ ಜೀರಿಗೆ, ಒಣ ಕೆಂಪು ಮೆಣಸು, 2 ಚಮಚ ಉಪ್ಪು, ½ ಚಮಚ ಇಂಗು, 1 ಕೆಜಿ ನಿಂಬೆ ಹಣ್ಣುೊ, 1/2 ಕೆಜಿ ಸಕ್ಕರೆ, 1 ಚಮಚ ಕಲ್ಲುಪ್ಪು,

ಮಾಡುವ ವಿಧಾನ :

ಮೊದಲು ನಿಂಬೆಹಣ್ಣಂನ್ನು ತೊಳೆದು ಉದ್ದವಾಗಿ ನಾಲ್ಕು ತುಂಡಾಗಿ ಕತ್ತರಿಸಿ. ಅದರ ಬೀಜಗಳನ್ನು ತೆಗೆಯಿರಿ. ಬಳಿಕ ನಿಂಬೆ ಹಣ್ಣಉನ್ನು ತರಿತರಿಯಾಗಿ ಪುಡಿ ಮಾಡಿ. ಆನಂತರ ಕೊತ್ತಂಬರಿ, ಸೊಂಪು, ಕರಿಮೆಣಸು, ಜೀರಿಗೆ, ಒಣ ಮೆಣಸಿನಕಾಯಿಯನ್ನು 2-3 ನಿಮಿಷಗಳ ಕಾಲ ಹುರಿಯಿರಿ.

ಬಳಿಕ ಅದನ್ನು ತಣ್ಣತಗಾಗಿಸಿ ಅವುಗಳನ್ನು ರುಬ್ಬಿ ಮಸಾಲೆ ತಯಾರಿಸಿ. ರುಬ್ಬುವಾಗ ಉಪ್ಪು, ಇಂಗನ್ನು ಮಿಕ್ಸ್ ಮಾಡಿ. ಬಳಿಕ ನಿಂಬೆ ಹಣ್ಣಿದ ಪುಡಿಗೆ ಸಕ್ಕರೆ ಮಿಕ್ಸ್ ಮಾಡಿ ಅದಕ್ಕೆ ರುಬ್ಬಿದ ಮಸಾಲೆ ಮಿಕ್ಸ್ ಮಾಡಿ, ಕಲ್ಲುಪ್ಪು ಸೇರಿಸಿ ಬಟ್ಟೆಯಲ್ಲಿ ಮುಚ್ಚಿ 2-3 ದಿನಗಳ ಕಾಲ ಇಡಬೇಕು. ಆನಂತರ ಅದನ್ನು ಗಾಜಿನ ಪಾತ್ರೆಯಲ್ಲಿಟ್ಟುಕೊಂಡರೆ ನಿಮಗೆ ಯಾವಾಗ ಬೇಕಾದರೂ ಬಳಸಬಹುದು.

Spread the love

Related Articles

Leave a Reply

Your email address will not be published. Required fields are marked *

Back to top button