ಮಳೆಗಾಲದ ಮನೆಮದ್ದುಗಳು!

- – ಪವಿತ್ರಾ
ಬಾಯಿ ರುಚಿ ಕೆಟ್ಟು ಹೋಗಿದೆಯೇ? ನೀವು ತಿಂದ ತಿನಿಸಿನ ರುಚಿ ಸಿಹಿಯೋ ಕಹಿಯೋ ತಿಳಿಯುತ್ತಿಲ್ಲವೇ? ಇದು ಕೊರೋನಾದ ಲಕ್ಷಣವೇ ಆಗಿರಬೇಕಿಲ್ಲ. ಮಳೆಗಾಲದಲ್ಲಿ ಬರುವ ಸಾಮಾನ್ಯ ಶೀತ ಲಕ್ಷಣವೂ ಆಗಿರಬಹುದು. ಇದನ್ನು ಪರಿಹರಿಸುವ ಮನೆಮದ್ದುಗಳು ಯಾವುವು?
ಆಯಿಲ್ ಪುಲ್ಲಿಂಗ್ ವಿಧಾನದ ಬಗ್ಗೆ ತಿಳಿದಿದೆಯೇ? ರಾತ್ರಿ ಮಲಗುವ ಮುನ್ನ ಒಂದು ಚಮಚ ತೆಂಗಿನ ಎಣ್ಣೆಯನ್ನು ಬಾಯಿಯಲ್ಲಿ ಹಾಕಿಕೊಂಡು ಹಲ್ಲು, ವಸಡು ಹಾಗೂ ನಾಲಗೆಗೆ ತಾಕುವಂತೆ ಚೆನ್ನಾಗಿ ಬಾಯಿ ಮುಕ್ಕಳಿಸಿ. ಕನಿಷ್ಠ ಐದು ನಿಮಿಷದ ಬಳಿಕ ಹೊರ ಉಗುಳಿ. ಇದರಿಂದ ಬಾಯಿ ರುಚಿ ಮರಳಿ ಬರುತ್ತದೆ.
ಪದೇ ಪದೇ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿದ ಪರಿಣಾಮ ರುಚಿ ಕಳೆದುಕೊಂಡಿದ್ದೀರಾ? ಬೇಕಿಂಗ್ ಸೋಡಾದಿಂದ ಬಾಯಿ ಮುಕ್ಕಳಿಸಿ. ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚ ಬೇಕಿಂಗ್ ಸೋಡಾ ಸೇರಿಸಿ. ಇದರಿಂದ ಬಾಯಿ ಮುಕ್ಕಳಿಸಿದರೂ ಈ ಸಮಸ್ಯೆ ಸರಿಯಾಗುತ್ತದೆ.
ಗ್ರೀನ್ ಟೀ ಕುಡಿಯುವುದರಿಂದ ಬಾಯಿಯ ದುರ್ವಾಸನೆ ದೂರವಾಗುವುದು ಮಾತ್ರವಲ್ಲ ರುಚಿಯೂ ಮರಳಿ ಬರುತ್ತದೆ ಎನ್ನಲಾಗಿದೆ. ಹಾಗಿದ್ದರೆ ತಡ ಏಕೆ, ವೈದ್ಯರ ಬಳಿ ತೆರಳುವ ಮುನ್ನ ಈ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ.