ಕಲೆಯಿಲ್ಲದ ತ್ವಚೆಯನ್ನು ಪಡೆಯಲು ಬೆಳ್ಳುಳ್ಳಿಯನ್ನು ಈ ರೀತಿ ಬಳಸಿ

– ಪವಿತ್ರಾ
ಬೆಳ್ಳುಳ್ಳಿಯನ್ನು ಅಡುಗೆಯಲ್ಲಿ ಬಳಸುತ್ತಾರೆ. ಇದು ಅಡುಗೆಯ ಪರಿಮಳವನ್ನು ಹೆಚ್ಚಿಸುತ್ತದೆ. ಅಲ್ಲದೇ ಇದು ಆರೋಗ್ಯಕ್ಕೂ ತುಂಬಾ ಉತ್ತಮ. ಇದು ಹಲವು ರೋಗಗಳನ್ನು ನಿವಾರಿಸುತ್ತದೆ. ಇದು ರೋಗಗಳ ವಿರುದ್ಧ ಹೋರಾಡಲು ಸಹಕಾರಿಯಾಗಿದೆ. ಅಲ್ಲದೇ ಇದು ಚರ್ಮದ ಸೌಂದರ್ಯವನ್ನು ಕಾಪಾಡಲು ಕೂಡ ಸಹಕಾರಿಯಾಗಿದೆ. ಹಾಗಾಗಿ ಬೆಳ್ಳುಳ್ಳಿಯಲ್ಲಿ ಈ ರೀತಿಯಲ್ಲಿ ಬಳಸಿ ಮುಖದ ಅಂದ ಹೆಚ್ಚಿಸಿಕೊಳ್ಳಿ.
ಬೆಳ್ಳುಳ್ಳಿ 1, ಜೇನುತುಪ್ಪ 2 ಚಮಚ, ನಿಂಬೆ ತೆಗೆದುಕೊಂಡು ಒಂದು ಕಪ್ ನೀರಿಗೆ ಬೆಳ್ಳುಳ್ಳಿಯಲ್ಲಿ ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ನಿಂಬೆ ರಸ ಮತ್ತು ಜೇನುತುಪ್ಪ ಮಿಕ್ಸ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಇದರಿಂದ ಚರ್ಮದಲ್ಲಿರ ಕಂಡುಬರುವ ವಯಸ್ಸಾದ ಚಿಹ್ನೆಗಳಾದ ಸುಕ್ಕುಗಳು, ಗೆರೆಗಳು ನಿವಾರಣೆಯಾಗುತ್ತದೆ.
½ ಟೊಮೆಟೊ, ಬೆಳ್ಳುಳ್ಳಿ 2 ತೆಗೆದುಕೊಂಡು ಎರಡನ್ನು ಒಟ್ಟಿಗೆ ಸೇರಿಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಕೈಗಳಿಂದ ಮಸಾಜ್ ಮಾಡಿ ಬಳಿಕ ಸ್ಟೀಮ್ ನೀಡಿ. 15 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ. ಇದು ತೈಲವನ್ನು ನಿಯಂತ್ರಿಸುತ್ತದೆ. ಚರ್ಮದ ರಂಧ್ರಗಳಲ್ಲಿರುವ ಕೊಳೆಗಳನ್ನು ನಿವಾರಿಸಿ ಬ್ಲ್ಯಾಕ್ ಹೆಡ್ ಗಳನ್ನು ನಿವಾರಿಸುತ್ತದೆ