ದೇಹದ ಶಕ್ತಿ ಹೆಚ್ಚಿಸುತ್ತೆ ಈ ಯೋಗಾಸನ

– ಪವಿತ್ರಾ
ವ್ಯಾಯಾಮಗಳನ್ನು ಮಾಡುವುದು ಆರೋಗ್ಯಕ್ಕೆ ತುಂಬಾ ಉತ್ತಮ. ದೇಹಕ್ಕೆ ಶಕ್ತಿ ಅಗತ್ಯ. ವ್ಯಾಯಾಮಗಳನ್ನು ಮಾಡುವುದಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಬೆಳಗಿನ ಜಾವದಲ್ಲಿ ಮಾಡುವ ವ್ಯಾಯಾಮ ನಿಮಗೆ ಹೆಚ್ಚು ಶಕ್ತಿಯನ್ನು ಒದಗಿಸುತ್ತದೆ. ಹಾಗಾಗಿ ಆಂಜನೇಯಾಸನವನ್ನು ಪ್ರಯತ್ನಿಸಿ.
ಇದನ್ನು ಮಾಡುವಾಗ ವಜ್ರಾಸನ ಭಂಗಿಯಲ್ಲಿ ಕುಳಿತುಕೊಳ್ಳಿ. ಮೊಣಕಾಲುಗಳನ್ನು ಬಾಗಿಸಿ ನಿಮ್ಮ ಎಡ ಪಾದವನ್ನು ಹಿಂದಕ್ಕೆ ತೆಗೆದುಕೊಂಡು ಬಲ ಪಾದವನ್ನು ನೆಲದ ಮೇಲೆ ಇರಿಸಿ. ಈಗ ಎರಡೂ ಕೈಗಳನ್ನು ತಲೆಯ ಮೇಲೆ ತೆಗೆದುಕೊಂಡು ಕೈಗಳನ್ನು ಜೋಡಿಸಿಕೊಳ್ಳಿ. ನಿಧಾನವಾಗಿ ಹಿಂದಕ್ಕೆ ವಾಲಲು ಪ್ರಯತ್ನಿಸಿ. ಕೈಗಳನ್ನು ತಲೆಯ ಹಿಂದೆ ಸಾಧ್ಯವಾದಷ್ಟು ತೆಗೆದುಕೊಳ್ಳಿ. ಈ ಸ್ಥಾನದಲ್ಲಿ 30 ಸೆಕೆಂಡುಗಳ ಕಾಲ ಉಳಿಯಿರಿ.
ಈ ಆಸನ ಮಾಡುವುದರಿಂದ ದೇಹದ ಶಕ್ತಿ ಹೆಚ್ಚಾಗುತ್ತದೆ. ನಿಮ್ಮ ಆಯಾಸ ನಿವಾರಣೆಯಾಗುತ್ತದೆ. ಮನೆ, ಕಚೇರಿಯ ಕೆಲಸಗಳನ್ನು ನಿಭಾಯಿಸಬಹುದು. ಇದರಿಂದ ಬೆನ್ನು ಕೂಡ ಬಲಗೊಳ್ಳುತ್ತದೆ. ಕಿಬ್ಬೊಟ್ಟೆಯ ಮತ್ತು ಸೊಂಟದ ಸ್ನಾಯುಗಳನ್ನು ಬಲಪಡಿಸುತ್ತದೆ. ಇದರಿಂದ ಶ್ವಾಸಕೋಶ ಬಲಗೊಳ್ಳುತ್ತದೆ. ಮತ್ತು ಎದೆಯ ಪ್ರದೇಶ ಬೆಳವಣಿಗೆ ಹೊಂದುತ್ತದೆ.
ಹಾಗೇ ಇದನ್ನು ಖಾಲಿ ಹೊಟ್ಟೆಯಲ್ಲಿ ಮಾಡಿದರೆ ಒಳ್ಳೆಯದು. ನಿಮ್ಮ ಬೆನ್ನು, ಹೊಟ್ಟೆ ಅಥವಾ ಕಾಲುಗಳಲ್ಲಿ ನೋವಿದ್ದರೆ ಇದನ್ನು ಮಾಡುವುದನ್ನು ತಪ್ಪಿಸಿ. ನಿಮಗೆ ಯಾವುದೇ ಗಂಭೀರ ಕಾಯಿಲೆಯಿದ್ದರೆ ಈ ಆಸನ ಮಾಡಬೇಡಿ.