ಆರೋಗ್ಯಆಹಾರಲೈಫ್ ಸ್ಟೈಲ್

ನವಜಾತ ಶಿಶುಗಳಿಗೆ ಜೇನುತುಪ್ಪ ನೀಡುವ ಮುನ್ನ ಎಚ್ಚರ…

– ಪವಿತ್ರಾ 

ಜೇನುತುಪ್ಪ ಆರೋಗ್ಯಕ್ಕೆ ಉತ್ತಮ ನಿಜ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರೀಯಲ್, ಆ್ಯಂಟಿ ಫಂಗಲ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಇದು ನಿಮಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಇದು ನಿಮ್ಮ ಮಕ್ಕಳನ್ನು ಕೂಡ ಆರೋಗ್ಯವಾಗಿರಿಸುತ್ತದೆ. ಆದರೆ ನವಜಾತ ಶಿಶುಗಳಿಗೆ ಜೇನುತುಪ್ಪ ನೀಡಿದರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ತಜ್ಞರ ಪ್ರಕಾರ ಒಂದು ವರ್ಷದೊಳಗಿನ ಮಕ್ಕಳಿಗೆ ಜೇನುತುಪ್ಪ ನೀಡಬಾರದು. ಒಂದು ವೇಳೆ ನೀಡಿದರೆ ಬೊಟುಲಿಸಮ್ ಎಂಬ ಗಂಭೀರ ಕಾಯಿಲೆಗೆ ತುತ್ತಾಗುವ ಅಪಾಯವಿದೆ. ಇದು ಕ್ಲೋಸ್ಟ್ರಿಡಿಯಂ ಬೋಟುಲಿನಮ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಇದು ಮಗುವಿನ ಜೀರ್ಣಾಂಗದಲ್ಲಿ ವಿಷವನ್ನು ಉತ್ಪತ್ತಿ ಮಾಡುತ್ತದೆ. ಇದು ಮಗುವಿನ ಸ್ನಾಯುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಇದರಿಂದ ಮಗುವಿನಲ್ಲಿ ಉಸಿರಾಟದ ಸ್ನಾಯುಗಳು ಪಾರ್ಶ್ವವಾಯುವಿಗೆ ಒಳಗಾಗಬಹುದು. ಮಲಬದ್ಧತೆ, ಆಲಸ್ಯ, ದೌರ್ಬಲ್ಯ, ಚಲನೆ ಕಡಿಮೆಯಾಗುವುದು, ನುಂಗಲು ತೊಂದರೆ, ಅತಿಯಾಗಿ ಜೊಲ್ಲು ಸೋರುವುದು, ಸ್ನಾಯು ದೌರ್ಬಲ್ಯ ಮತ್ತು ಉಸಿರಾಟದ ತೊಂದರೆ ಕಾಡುತ್ತದೆ.

Spread the love

Related Articles

Leave a Reply

Your email address will not be published. Required fields are marked *

Back to top button