ಅರ್ಬಾಜ್ ಕೊಲೆ ಪ್ರಕರಣ – ನ್ಯಾಯಕ್ಕಾಗಿ ದ್ವನಿ ಎತ್ತಿದ ಶಾಸಕಿ ಅಂಜಲಿ ನಿಂಬಾಳ್ಕರ್

ಬೆಳಗಾವಿ: ಹಿಂದೂ ಪರ ಸಂಘಟನೆಯ ಮುಖಂಡರಿಂದ ಸೆಪ್ಟೆಂಬರ್ 28 ರಂದು ನಡೆದಿದ್ದ ಅರ್ಬಾಜ್ ಕೊಲೆ ಪ್ರಕರಣ ದೇಶವ್ಯಾಪಿ ಚರ್ಚೆಗೆ ಒಳಪಡುತ್ತಿದೆ, ದೇಶದ ಪ್ರಮುಖ ವ್ಯಕ್ತಿಗಳು ಸೇರಿದಂತೆ ಅನೇಕ ಸಾಮಾಜಿಕ ಹೊರಾಟಗಾರರು #justiceforarbaz ಹ್ಯಾಶ್ ಟ್ಯಾಗ್ ಮೂಲಕ ಅಭಿಯಾನ ಆರಂಭಿಸಿದ್ದಾರೆ. ಆದ್ರೆ ಘಟನೆ ನಡೆದು ಐದು ದಿನಗಳು ಕಳೆದರು ಸ್ಥಳೀಯ ನಾಯಕರು ಮಾತ್ರ ಘಟನೆ ಕುರಿತು ಧ್ವನಿ ಎತ್ತುತ್ತಿಲ್ಲ.

ಇದನ್ನೂ ಓದಿ : ಬೆಳಗಾವಿಯಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದಲ್ಲಿ ಪ್ರತಿಭಟನೆ: ಲತಿಫ್​​ ಖಾನ್ ಪಠಾಣ

ಸದ್ಯ ಸ್ಥಳೀಯ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅರ್ಬಾಜ್ ಕೊಲೆ ಪ್ರಕರಣ ಕುರಿತು ಟ್ವೀಟ್ ಮಾಡಿದ್ದು ಬರ್ಬರವಾಗಿ ಹತ್ಯೆಮಾಡಿರುವ ಆರೋಪಿಗಳಿಗೆ ಶಿಕ್ಷೆ ಆಗಬೇಕು ಹಾವು ಶೀಘ್ರವಾಗಿ ನ್ಯಾಯಸಮ್ಮತವಾಗಿ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನ ಅಗ್ರಹಿಸಿದ್ದಾರೆ.

ಸದ್ಯ ಸಂಕಷ್ಟದಲ್ಲಿರುವ ಅರ್ಬಾಜ್ ಕುಟುಂಬಸ್ಥರು ಹಾಗೂ ಸ್ನೇಹಿತರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಶಾಸಕರ ನಮಗೆ ನ್ಯಾಯ ದೊರಕಿಸಿ ಕೊಡಲಿ ಎಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here