
ಬೆಂಗಳೂರು: ಬಾಲಾಜಿ ಗ್ರೂಪ್ ಕೋವಿಡ್ ಸಂದರ್ಭದಲ್ಲಿ ಕಷ್ಟದಲ್ಲಿರುವವರ ನೆರವಿಗೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಕಷ್ಟದಲ್ಲಿರುವ ಕೂಲಿ ಕಾರ್ಮಿಕ ಕುಟುಂಬಗಳನ್ನು ಗಮನಿಸಿ ಅವರಿಗೆ ನೆರವಾಗುವ ಅಭಿಯಾನ ಮುಂದುವರಿದಿದೆ.
ನಿನ್ನೆ ನೆಲೆಯಿಲ್ಲದ ಹಲವು ಕುಟುಂಬಗಳಿಗೆ 15 ದಿನಗಳಿಗಾಗುವಷ್ಟು ದಿನಸಿ ಮತ್ತಿತರ ಅಗತ್ಯ ವಸ್ತು ವಿತರಿಸಿದ್ದ ಬಾಲಾಜಿ ಮೀಡಿಯಾ ಗ್ರೂಪ್ ಅಡ್ವೈಸರ್ ಮತ್ತು ಲೈವ್ ಕನ್ನಡ ಪ್ರಧಾನ ಸಂಪಾದಕ ಶಶಿಧರ್ ಭಟ್ ಅವರು ಇಂದು ವಿಜಯನಗರದಲ್ಲಿ ಕೂಲಿ ಕಾರ್ಮಿಕ ಕುಟುಂಬಗಳಿಗೆ ಬಾಲಾಜಿ ಗ್ರೂಪ್ ವತಿಯಿಂದ ದಿನಸಿ ವಿತರಿಸಿದರು.
ಗಾರೆ ಕೆಲಸ ಮಾಡಿಕೊಂಡಿದ್ದು, ಈಗ ಕೆಲಸವಿಲ್ಲದೆ ಕಷ್ಟ ಅನುಭವಿಸುತ್ತಿರುವ ಈ ಕುಟುಂಬಗಳಿಗೆ ಆಹಾರಧಾನ್ಯ ವಿತರಿಸಿದ ಶಶಿಧರ್ ಭಟ್ ಅವರು, ಆ ಕುಟುಂಬಗಳ ಕಷ್ಟ ಆಲಿಸಿದರು.