ರಾಷ್ಟ್ರೀಯ
ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಅನೂಪ್ ಚಂದ್ರ ಪಾಂಡೆ

ದೆಹಲಿ: ಚುನಾವಣಾ ಆಯೋಗದ ನೂತನ ಆಯುಕ್ತರನ್ನಾಗಿ ಅನೂಪ್ ಚಂದ್ರ ಪಾಂಡೆ ನೇಮಕವಾಗಿದ್ದಾರೆ. ಸುಶೀಲ್ ಚಂದ್ರ ಮುಖ್ಯ ಆಯುಕ್ತರಾದ ಬಳಿಕ ತೆರವಾಗಿದ್ದ ಸ್ಥಾನಕ್ಕೆ ಪಾಂಡೆಯನ್ನು ರಾಷ್ಟ್ರಪತಿ ನೇಮಕ ಮಾಡಿದ್ದಾರೆ.
ಕಳೆದ 1984ರಲ್ಲಿ ಉತ್ತರ ಪ್ರದೇಶ ಕೇಡರ್ನಲ್ಲಿ ಐಎಎಸ್ ಅಧಿಕಾರಿಯಾಗಿದ್ದ ಅನೂಪ್ ಚಂದ್ರ ಪಾಂಡೆ ಈ ಹಿಂದೆ ಭಾರತೀಯ ರಕ್ಷಣಾ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಹಾಗೂ ಕೇಂದ್ರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಪ್ರಾಚೀನ ಇತಿಹಾಸ ವಿಷಯದಲ್ಲಿ ಪಿಹೆಚ್ಡಿ ಪಡೆದಿರುವ ಅವರು ಉತ್ತರ ಪ್ರದೇಶದಲ್ಲಿ ವಿವಿಧ ಸರ್ಕಾರಿ ಹುದ್ದೆಯನ್ನೂ ನಿಭಾಯಿಸಿದ್ದರು.