ರಾಷ್ಟ್ರೀಯ
ಕಳಪೆ ಕಾಮಗಾರಿ; ರಾಂಚಿಯಲ್ಲಿ ಮುರಿದುಬಿದ್ದ ಸೇತುವೆ

ರಾಂಚಿ: ಜಾರ್ಖಂಡ್ ನ ರಾಂಚಿಯಲ್ಲಿ, ಕೋಟ್ಯಂತರ ವೆಚ್ಚದಲ್ಲಿ ಕಾಂಚಿ ನದಿಗೆ ಅಡ್ಡಲಾಗಿ ಕಳೆದ ಮೂರು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ಸೇತುವೆ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿಯಿಂದಾಗಿ ಗುರುವಾರ ಮುರಿದು ಬಿದ್ದಿದೆ.
ಇದು ರಾಂಚಿ ಜಿಲ್ಲೆಯ ತಮರ್, ಬುಂಡು ಮತ್ತು ಸೋನಾಹತುಗಳಿಗೆ ಪ್ರಮುಖ ಸಂಪರ್ಕ ಸೇತುವೆಯಾಗಿತ್ತು.
ಅಕ್ರಮ ಮರಳು ಮಾಫಿಯಾ ಇಲ್ಲಿ ನಿರಂತರವಾಗಿ ಮರಳನ್ನು ಅಗೆದು ತೆಗೆಯುತ್ತಿದ್ದರಿಂದ ಸೇತುವೆ ಪಿಲ್ಲರ್ ಗಳು ದುರ್ಬಲವಾಗಿದ್ದರಿಂದ ಮತ್ತು ಯಾಸ್ ಚಂಡಮಾರುತದದಿಂದ ನೀರಿನ ಹರಿವು ಹೆಚ್ಚಾಗಿ ಸೇತುವೆ ಮುರಿದು ಬೀಳಲು ಕಾರಣ ಎಂದು ಸ್ಥಳೀಯರು ಅಂದಾಜಿಸಿದ್ದಾರೆ.